

ಬಸವಕಲ್ಯಾಣ: ನಗರದ ಶ್ರೀ ಬನಶಂಕರಿ ಓಣಿಯ ಶ್ರೀ ನಾಗಲಿಂಗೇಶ್ವರ ದೇವಾಲಯದಲ್ಲಿ ನಾಗರ ಪಂಚಮಿ ನಿಮಿತ್ತ ಶುಕ್ರವಾರ ವಿಶೇಷ ಪೂಜೆ, ಅಭಿಷೇಕ, ಭಜನೆ, ಪಲ್ಲಕ್ಕಿ ಉತ್ಸವ ಸೇರಿ ವಿವಿಧ ಕಾರ್ಯಕ್ರಮ ಜರುಗಿದವು. ಬಡಾವಣೆಯ ಭಕ್ತರು ಭಾಗವಹಿಸಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ದೇವಾಲಯದಿಂದ ಬನಶಂಕರಿ ಗಲ್ಲಿ, ಈಶ್ವರ ನಗರ, ಸುಭಾಷ ಚೌಕ, ಶ್ರೀ ಬಸವೇಶ್ವರ ದೇವಸ್ಥಾನ, ಗಾಂಧಿ ವೃತ್ತದ ಮೂಲಕ ದೇವಾಲಯದವರೆಗೆ ಬ್ಯಾಂಡ್ ಬಾಜಾದೊಂದಿಗೆ ನಡೆದ ಬೆಳ್ಳಿ ಮೂರ್ತಿಯ ವೈಭವದ ಪಲ್ಲಕ್ಕಿ ಮೆರವಣಿಗೆಗೆ ನಗರ ಪೊಲೀಸ್ ಠಾಣೆ ಪಿಎಸ್‌ಐ ಅಂಬರೀಷ್ ವಾಗ್ಮೋಡೆ ಚಾಲನೆ ನೀಡಿದರು.
ಶ್ರೀ ಬನಶಂಕರಿ ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷ ಡಾ.ಜಿ.ಎಸ್.ಭುರಳೆ, ಕಾರ್ಯದರ್ಶಿ ದಿಲೀಪ ರುಮ್ಮಾ, ಮಹೇಶ ಸುಂಟನೂರೆ, ಬಾಬು ಹೆಗ್ಗೆ, ಅಶೋಕ ಹಿಪ್ಪರ್ಗೆ, ಶಂಕರ ಮ್ಯಾಕಾ, ಸಂತೋಷ ಬೈರಾಮಡಗಿ, ಶಂಕರ ಮಠಪತಿ, ಸಾಗರ ಕಡಗಂಚೆ, ವೀರೇಶ ಹಲಗುಂಡೆ, ವಿವೇಕಾನಂದ ಸ್ವಾಮಿ, ಚೇತನ ಮಠಪತಿ, ಸುಶಿಲಾಬಾಯಿ ಧನ್ನೂರೆ ಇತರರಿದ್ದರು.