ಶರಣ ಹರಳಯ್ಯ ಸ್ಮಾರಕ ನಿರ್ಮಾಣ

oplus_3276800
ಬಸವಕಲ್ಯಾಣದಲ್ಲಿ ಭಾನುವಾರ ಆಯೋಜಿಸಿದ್ದ ಹರಳಯ್ಯನವರ ಮೂರ್ತಿ ಅನಾವರಣ, ಸಮಗಾರರ ಸಮಾವೇಶವನ್ನು ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ಶ್ರೀ ಡಾ.ಬಸವಲಿಂಗ ಪಟ್ಟz್ದÉÃವರು, ಶ್ರೀ ಸುಖದೇವಜಿ ಮಹಾರಾಜ, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಪೂಜ್ಯ ಡಾ.ಗಂಗಾAಬಿಕೆ ಅಕ್ಕ, ಶಾಸಕ ಶರಣು ಸಲಗರ, ಪ್ರೊ.ಶಿವಶರಣಪ್ಪ ಹುಗ್ಗೆ ಪಾಟೀಲ್, ಶಿವಾಜಿರಾವ ಕಾಂಬ್ಳೆ ಇತರರಿದ್ದರು.
Published on

ಬಸವಕಲ್ಯಾಣ: ಕಲ್ಯಾಣ ಕ್ರಾಂತಿಗೆ ಬುನಾದಿ ಹಾಕಿದ್ದ ಶಿವಶರಣ ಹರಳಯ್ಯನವರ ಭವ್ಯವಾದ ಸ್ಮಾರಕ ಬರುವ ದಿನಗಳಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ಹರಳಯ್ಯ ವೃತ್ತದಲ್ಲಿ ಭಾನುವಾರ ಆಯೋಜಿಸಿದ್ದ ಮಹಾ ಶಿವಶರಣ ಹರಳಯ್ಯನವರ ಮೂರ್ತಿ ಅನಾವರಣ ಹಾಗೂ ಸಮಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸಮ ಸಮಾಜ ನಿರ್ಮಾಣ ಬಸವಣ್ಣನವರ ಕನಸಸಾಗಿತ್ತು. ೧೨ನೇ ಶತಮಾನದಲ್ಲಿ ಜಾತಿ ರಹಿತವಾದ ಸಮಾನತೆ ಸಮಾಜ ನಿರ್ಮಾಣಕ್ಕಾಗಿ ನಡೆದ ಹೋರಾಟ ಕಲ್ಯಾಣ ಕ್ರಾಂತಿಗೆ ಕಾರಣವಾಗಿತ್ತು ಎಂದು ವಿಶ್ಲೇಷಿಸಿದರು.

ಬಸವಣ್ಣನವರ ನೇತೃತ್ವದಲ್ಲಿ ಸಮಾಜೋಧಾರ್ಮಿಕ ಕ್ರಾಂತಿ ನಡೆಯಿತು. ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ್ದು ಅನುಭವ ಮಂಟಪ. ಶರಣರ ತತ್ವಾದರ್ಶಗಳು ಸರ್ವ ಕಾಲಕ್ಕೂ ಪ್ರಸ್ತುತ. ನಮ್ಮ ತಂದೆಯವರಾದ ಭೀಮಣ್ಣ ಖಂಡ್ರೆ ಅವರು ಕಲ್ಯಾಣದಲ್ಲಿ ೨೦೧೨ಲ್ಲಿ ಶಿವಶರಣ ಹುತಾತ್ಮ ದಿನಾಚರಣೆಯನ್ನು ಬೃಹತ್ ಪ್ರಮಾಣದಲ್ಲಿ ಆಚರಣೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಕಲ್ಯಾಣದಲ್ಲಿ ಹುತಾತ್ಮ ಸ್ಮಾರಣ ನಿರ್ಮಾಣದ ಬಗ್ಗೆ ಹೇಳಿದ್ದರು. ಇದು ಅವಶ್ಯಕವಾಗಿದ್ದು, ಈ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.

ಸಿದ್ದರಾಮಯ್ಯನವರು ಮೊದಲ ಅವಧಿಯಲ್ಲಿ ಸಿಎಂ ಆಗಿದ್ದಾಗ ೬೫೦ ಕೋಟಿ ರೂ.ವೆಚ್ಚದದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಸರ್ಕಾರ ಬದಲಾದ ನಂತರ ಬಿ.ಎಸ್.ಯಡಿಯೂಪ್ಪನವರ ಅವಧಿಯಲ್ಲಿ ೨೦೦ ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಈಗ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ೧೫ ತಿಂಗಳಲ್ಲಿ ೧೦೦ ಕೋಟಿ ರೂ. ಬಿಡುಗಡೆ ಮಾಡಿದೆ. ಶೇ.೪೮ರಷ್ಟು ಕಾಮಗಾರಿ ಪೂರ್ಣವಾಗಿದೆ. ಮುಂದಿನ ವರ್ಷ ಅಂತ್ಯದವರೆಗೆ ಕಾಮಗಾರಿ ಮುಗಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ ವಿಶ್ವಬಸವ ಧರ್ಮ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಧ್ವಜಾರೋಹಣ ನೆರವೇರಿಸಿದರು. ಅಖಿಲ ಭಾರತೀಯ ರವಿದಾಸಿಯಾ ಧರ್ಮ ಸಂಘಟನೆಯ ಅಧ್ಯಕ್ಷ ಸಂತಶ್ರೀ ಸುಖದೇವಜಿ ಮಹಾರಾಜ, ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಪೂಜ್ಯ ಡಾ.ಗಂಗಾಂಬಿಕೆ ಅಕ್ಕ, ಶಾಸಕ ಶರಣು ಸಲಗರ ಮಾತನಾಡಿದರು. ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರೊ.ಶಿವಶರಣಪ್ಪ ಹುಗ್ಗೆ ಪಾಟೀಲ್ ಉಪನ್ಯಾಸ ನೀಡಿದರು. ಶಿವಶರಣ ಹರಳಯ್ಯ ಸಮಾಜದ ತಾಲೂಕು ಆಧ್ಯಕ್ಷ ಶಿವಾಜಿರಾವ ಕಾಂಬ್ಳೆ ಅಧ್ಯಕ್ಷತೆ ವಹಿಸಿದ್ದರು.

ಭಂತೆ ಜ್ಞಾನ ಸಾಗರ, ಶ್ರೀ ಸುಖದೇವಜಿ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಎಂಎಲ್ಸಿ ವಿಜಯಸಿಂಗ್, ಕಾಂಗ್ರೆಸ್ ಮುಖಂಡರಾದ ಧನರಾಜ ತಾಳಂಪಳ್ಳಿ, ಶಶಿಕಾಂತ ದುರ್ಗೆ, ಅಜರ್ ಅಲಿ ನವರಂಗ್, ಶಿವರಾಜ ನರಶೆಟ್ಟಿ, ಪ್ರಮುಖರಾದ ಬಸವರಾಜ ಮುರಡೆ, ಯುವರಾಜ ಭೆಂಡೆ, ಜಿ.ಆರ್.ಪಾಟೀಲ್, ತಹಸಿನ್ ಅಲಿ ಜಮಾದಾರ್, ರವೀಂದ್ರ ಬೋರಾಳೆ, ರವೀಂದ್ರ ಕೊಳಕೂರ್, ಸಮಾಜದ ಮುಖರಾದ ಗೌತಮ ಜಾಧವ್, ಮಧುಕರ ಹಮೀಲಪುರೆ, ಮೋಹನ ಕಾಂಬ್ಳೆ, ಸೂರ್ಯಕಾಂತ ಕಾಂಬ್ಳೆ, ಮಧುಕರ ಕಾಂಬ್ಳೆ, ರಮೇಶ ಕಾಂಬ್ಳೆ, ಕೋಂಡಿಬಾ ಜಾಧವ್, ಸುಧಾಕರ್ ಗೋಕಲೆ, ವಿಜಯಕುಮಾರ ಕಾಂಬ್ಳೆ, ರಾಜು ಸಿಂಧೆ, ವಿಲಾಸರಾವ ಕಾಂಬ್ಳೆ, ಧನರಾಜ ಭಾಲ್ಕೆ, ಜೈರಾಮ ಕಾಂಬ್ಳೆ, ರಮೇಶ ಸೂರ್ಯವಂಶಿ, ವಿದ್ಯಾಸಾಗರ ಜಾಧವ್, ಜೈಹಿಂದ ಜಾಧವ್, ರಾಜಕುಮಾರ ಜಾಧವ್, ಗೋವಿಂದ ಕಾಂಬ್ಳೆ, ಮನೋಹರ ಅಬಿಲಪುರೆ ಇತರರಿದ್ದರು. ಸೂರ್ಯಕಾಂತ ಟಿಕೇಕರ್ ಹಾಗೂ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು. ಶಿವರಾಜ ಕಾಂಬ್ಳೆ ವಂದಿಸಿದರು.

ವಿಶ್ವದ ಜನ ಕಲ್ಯಾಣದತ್ತ ನೋಡಲಿ: ಜನ ಕಲ್ಯಾಣಕ್ಕಾಗಿ ಜ್ಞಾನ ನೀಡುವ ಕಾರ್ಯವನ್ನು ಸಂತ ಶಿರೋಮಣಿ ಗುರು ರವಿದಾಸ ಮಹಾರಾಜರು ಮಾಡಿದ್ದಾರೆ. ಸಮಗಾರ ಸಮಾಜಕ್ಕೆ ದೊಡ್ಡ ಇತಿಹಾಸವಿದೆ. ಭೂಮಿ ಇರುವ ಎಲ್ಲ ದೇಶಗಳಲ್ಲಿಯೂ ಈ ಸಮುದಾಯದ ಜನ ವಾಸಿಸುತ್ತಾರೆ ಎಂದು ಅಖಿಲ ಭಾರತೀಯ ರವಿದಾಸಿಯಾ ಧರ್ಮ ಸಂಘಟನೆ ಅಧ್ಯಕ್ಷರಾದ ೧೦೮ ಸಂತ ಶ್ರೀ ಸುಖದೇವ ಮಹಾರಾಜ ಹೇಳಿದರು. ಸಮಾನತೆಗಾಗಿ ಕ್ರಾಂತಿ ನಡೆದ ಕಲ್ಯಾಣದ ನೆಲದಲ್ಲಿ ಶಿವಶರಣ ಹರಳಯ್ಯನವರ ಸ್ಮಾರಕ ನಿರ್ಮಾಣವಾಗಬೇಕು. ವಿಶ್ವದ ಗಮನ ಕಲ್ಯಾಣದ ಕಡೆಗೆ ಸೆಳೆಯುವ ಕಾರ್ಯ ಇಲ್ಲಿ ನಡೆಯಬೇಕು. ಸಮಾಜದ ಹಿತಕ್ಕಾಗಿ, ಸಂತ ಮಹಾತ್ಮರನ್ನು ಕಲ್ಯಾಣಕ್ಕಾಗಿ ಕಾರ್ಯ ಮಾಡಿದ ಮಹಾತ್ಮರನ್ನು, ಮಹಾಪುರುಷರ ತತ್ವಾದರ್ಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಮಾತ್ಮನ ನಾಮ ಸ್ಮರಣೆ ಮಾಡಬೇಕು. ಗುರು ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.

ಸ್ಮಾರಕ ನಿರ್ಮಾಣವಾಗಲಿದೆ:ಕಲ್ಯಾಣದಲ್ಲಿ ಹತ್ತು ಎಕರೆ ಪ್ರದೇಶದಲ್ಲಿ ಶಿವಶರಣ ಹರಳಯ್ಯನವರ ಸ್ಮಾರಕ ನಿರ್ಮಾಣವಾಗಬೇಕು. ಕಲ್ಯಾಣ ಕ್ರಾಂತಿಕೆ ಕಾರಣವಾದ ಘಟನೆಗಳನ್ನು ಇಲ್ಲಿ ಅನಾವರಣವಾಗಬೇಕು. ವಿಶ್ವದ ಜನ ಕಲ್ಯಾಣದತ್ತ ನೋಡುವಂತೆ ಸ್ಮಾರಕ ನಿರ್ಮಾಣವಾಗಬೇಕು ಎಂದು ವಿಶ್ವಬಸವ ಧರ್ಮ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು. ಲಿಂಗಾಯತ ಧರ್ಮಕ್ಕಾಗಿ, ಸಮತೆಯ ತತ್ವಕ್ಕಾಗಿ ಮೊದಲಿಗೆ ತ್ಯಾಗ ಮಾಡಿದವರು ಶಿವಶರಣ ಹರಳಯ್ಯನವರು. ತ್ಯಾಗದ ತಳಹದಿಯ ಮೇಲೆ ಧರ್ಮ ನಿಂತಿದೆ. ಶಿವಶರಣ ಹರಳಯ್ಯನವರ ಸ್ಮಾರಕ ನಿರ್ಮಿಸುವ ಮೂಲಕ ಕಲ್ಯಾಣ ಕ್ರಾಂತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು ಎಂದರು.

ಈಶ್ವರ ಖಂಡ್ರೆ ಸಿಎಂ ಆಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲ. ಒಂದು ವೇಳೆ ಹೊಸ ಸಿಎಂ ಆಗುವ ಬೆಳವಣಿಗೆಗಳೇನಾದರೂ ನಡೆದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ಅವಕಾಶ ನೀಡಬೇಕು ಎಂದು ಹುಲಸೂರಿನ ಶ್ರೀ ಶಿವಾನಂದ ಮಹಾಸ್ವಾಮೀಜಿ ಆಶಯ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಈಶ್ವರ ಖಂಡ್ರೆ ಅವರು ರಾಜ್ಯದಲ್ಲಿ ಗಟ್ಟಿ ಸರ್ಕಾರವಿದೆ. ೨೦೨೮ರ ವರೆಗೆ ಸಿದ್ದರಾಮಯ್ಯನವರೇ ಸಿಎಂ ಆಗಿ ಇರಲಿದ್ದಾರೆ ಎಂದರು.

ಶಿವಶರಣ ಹರಳಯ್ಯನವರು ಶ್ರೇಷ್ಠ ಶರಣರು. ೬೫೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪದ ನಾಲ್ಕು ಮುಖ್ಯ ಮಹಾದ್ವಾರಗಳಲ್ಲಿ ಒಂದು ಮಹಾದ್ವಾರಕ್ಕೆ ಶಿವಶರಣ ಹರಳಯ್ಯನವರ ಹೆಸರಿಡಬೇಕು. ವ್ಯಾಪಕ ಮಳೆಯಿಂದಾಗಿ ತಾಲೂಕಿನಲ್ಲಿ ೧೭ ಸೇತುವೆಗಳಿಗೆ ಹಲವು ರಸ್ತೆಗಳಿಗೆ ಹಾನಿಯಾಗಿದ್ದು, ಇವುಗಳ ನಿರ್ಮಾಣಕ್ಕೆ ಸರ್ಕಾರದಿಂದ ವಿಶೇಷ ಅನುದಾನ ಕಲ್ಪಿಸಬೇಕು.
| ಶರಣು ಸಲಗರ ಶಾಸಕ

ಬಸವಕಲ್ಯಾಣ ನಗರದಲ್ಲಿ ಶಿವಶರಣ ಹರಳಯ್ಯನವರ ಸ್ಮಾರಕ ನಿರ್ಮಿಸಬೇಕು. ಹರಳಯ್ಯ ವೃತ್ತದ ಬಳಿ ದೊಡ್ಡದಾದ ಸರ್ಕಲ್ ನಿರ್ಮಾಣಕ್ಕೆ ಸ್ಥಳ ಒದಗಿಸಬೇಕು. ಅನುಭವ ಮಂಟಪ ಸಮಿತಿಯಲ್ಲಿ ಪೂಜ್ಯರಿಗೆ ಹಾಗೂ ಎಲ್ಲ ಶರಣರ ಸಮುದಾಯದವರಿಗೆ ಅವಕಾಶ ಕಲ್ಪಿಸಬೇಕು
| ಮಲ್ಲಿಕಾರ್ಜುನ ಖೂಬಾ ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net