ಮರಳಿ ಮಹಿಳೆ ಕೈ ಸೇರಿದ ಚಿನ್ನಾಭರಣ

30BK2
ಬಸವಕಲ್ಯಾಣದಲ್ಲಿ ಮಹಿಳೆಯೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ಚಾಲಕ ಗೌಸ್ ಮರಳಿ ಪ್ರಮಾಣಿಕತೆಗೆ ಮೆರೆದಿದ್ದಾನೆ. ಪಿಎಸ್‌ಐ ಅಂಬ್ರೀಷ್ ವಾಗ್ಮೋಡೆ ಹಾಗೂ ಸಿಬ್ಬಂದಿ ಇದ್ದರು.
Published on

ಬಸವಕಲ್ಯಾಣ: ಆಟೋದಲ್ಲಿ ಪ್ರಯಾಣಿಸುವಾಗ ಮಹಿಳೆಯೊಬ್ಬರು ಮರೆತು ಬಿಟ್ಟು ಹೋಗಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ಮರಳಿಸುವ ಮೂಲಕ ಆಟೋ ಚಾಲಕ ಪ್ರಾಮಾಣಿಕತೆ ಮೆರೆದ ಪ್ರಸಂಗ ನಗರದಲ್ಲಿ ಶನಿವಾರ ಸಂಜೆ ನಡೆದಿದೆ.

ನಗರದ ಯಾಕತಪುರ ಬಡಾವಣೆ ನಿವಾಸಿ ಗೌಸ್ ಅಜೀಜ್‌ಮಿಯಾ ಹಣ ಹಾಗೂ ಚಿನ್ನಾಭರಣ ಮರಳಿಸಿದ ಚಾಲಕ.

ತಾಲೂಕಿನ ಕೋಹಿನೂರ ಗ್ರಾಮದ ಲಲಿತಾ ಕಾಶೀನಾಥ ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿನ ಅಂಗಡಿಯಿಂದ ಕಿರಾಣಿ ವಸ್ತುಗಳನ್ನು ಖರೀದಿಸಿದ ನಂತರ ಟೂರಿಸ್ಟ್ ಲಾಡ್ಜ್ ವರೆಗೆ ಆಟೋದಲ್ಲಿ ತೆರಳಿದ್ದಾಳೆ. ಆದರೆ ನಗದು ಹಣ, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಹೊಂದಿದ್ದ ಪರ್ಸ್ ಬಿಟ್ಟು ಇಳಿದಿದ್ದಾರೆ. ಈ ಕುರಿತು ನಗರ ಠಾಣೆ ಪೊಲೀಸರಿಗೆ ಮಹಿಳೆ ನೀಡಿದ ಮಾಹಿತಿ ಮೇರೆಗೆ ನಗರ ಠಾಣೆ ಪಿಎಸ್‌ಐ ಅಂಬ್ರೀಷ್ ವಾಗ್ಮೋಡೆ ನೇತೃತ್ವದಲ್ಲಿ ಕಾರ್ಯಾಚರಣೆಗೆ ಮುಂದಾದ ಪೊಲೀಸ್ ಸಿಬ್ಬಂದಿ ಅಶೋಕ ಪವಾರ್, ಸಿಮನ್ ಹಾಗೂ ರಾಜಕುಮಾರ ಚಂಡಕಾಪುರೆ ನೇತೃತ್ವದ ತಂಡ ಸಿಸಿ ಟಿವಿ ದೃಶ್ಯದ ಸಹಾಯದೊಂದಿಗೆ ಮಹಿಳೆ ಪ್ರಯಾಣಿಸಿದ ಆಟೋ ಬಗ್ಗೆ ಪತ್ತೆ ಹಚ್ಚಿ ಚಾಲಕನಿಗೆ ವಿಚಾರಿಸಿದ್ದಾರೆ.

ಆಟೋ ಪರಿಶೀಲಿಸಿದ ಚಾಲಕ ಮಹಿಳೆಯ ಪರ್ಸ್ ಆಟೋದಲ್ಲೆ ಇರುವ ಬಗ್ಗೆ ಮಾಹಿತಿ ನೀಡಿದಲ್ಲದೆ ತಕ್ಷಣ ಠಾಣೆಗೆ ಬಂದು ಪೊಲೀಸರ ಸಮ್ಮುಖದಲ್ಲೇ ಮಹಿಳೆಗೆ ಪರ್ಸ್ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ಪರ್ಸ್ನಲ್ಲಿ ೧೩ ಸಾವಿರ ನಗದು, ೨೦ ಸಾವಿರ ರೂ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಇದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net