

ಬಸವಕಲ್ಯಾಣ: ವಿದ್ಯಾರ್ಥಿಗಳು ಶ್ರಮ ವಹಿಸಿ ಅಭ್ಯಾಸ ಮಾಡುವ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ವಾಣಿಜ್ಯ ಸಹಾಯಕ ಆಯುಕ್ತ ಡಾ.ಮಹೇಶ ಪಾಟೀಲ್ ಹೇಳಿದರು.
ನಗರದ ಸರ್ಕಾರಿ ನೀಲಾಂಬಿಕಾ ಬಾಲಕಿಯರ ಪ್ರೌಢ ಶಾಲೆಯಲ್ಲಿ ಶಿಕ್ಷಣ ಮೌಲ್ಯಗಳ ಸಂರಕ್ಷಣಾ ಟ್ರಸ್ಟ್ನಿಂದ ಸೋಮವಾರ ಆಯೋಜಿಸಿದ್ದ ಪ್ರಥಮ ಶಾಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೌಲ್ಯಾಧಾರಿತ ಶಿಕ್ಷಣ ಅವಶ್ಯಕ. ಜೀವನದಲ್ಲಿ ಶಿಕ್ಷಣ ಮತ್ತು ಮೌಲ್ಯ ಅತೀ ಮುಖ್ಯ. ವಿದ್ಯಾರ್ಥಿಗಳಲ್ಲಿ ಆದರ್ಶಮೌಲ್ಯ, ಆತ್ಮಸ್ಥೈರ್ಯ ಬೆಳೆಸುವ ಕೆಲಸ ನಡೆಯಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಟ್ರಸ್ಟ್ ಅಧ್ಯಕ್ಷರು ಆಗಿರುವ ಬಂದವರ ಓಣಿ ಅಕ್ಕಮಹಾದೇವಿ ಗವಿಯ ಮಾತೆ ಕಲ್ಯಾಣಮ್ಮ ಪ್ರ್ರಾಸ್ತಾವಿಕ ಮಾತನಾಡಿ, ಟ್ರಸ್ಟ್ನ ಧ್ಯೇಯೋದ್ಧೇಶ ತಿಳಿಸಿದರು. ನೇತೃತ್ವ ವಹಿಸಿದ್ದ ಟ್ರಸ್ ಕಾರ್ಯದರ್ಶಿ ಚಿತ್ರಲೇಖಾ ಪಾಟೀಲ್ ಅನುಭಾವ ನೀಡಿದರು. ಶಾಲೆಯ ಉಪಪ್ರಾಚಾರ್ಯ ಶಂಕರ ಮಾಲಿಬಿರಾದಾರ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕ ಚನ್ನಬಸಪ್ಪ ಸ್ವಾಗತಿಸಿದರು. ಮಹೇಶಕುಮಾರ ವಂದಿಸಿದರು. ಶಿಕ್ಷಕಿ ವಿಜಯಲಕ್ಷ್ಮೀ ನಿರೂಪಣೆ ಮಾಡಿದರು. ಬಾಲಕಿಯರು ಪ್ರಾರ್ಥನಾ ಗೀತೆ ಹಾಡಿದರು.