

ಬಸವಕಲ್ಯಾಣ: ವಿದ್ಯಾರ್ಥಿ ಜೀವನದಲ್ಲಿ ಶ್ರಮ ವಹಿಸಿ ಅಭ್ಯಾಸ ಮಾಡುವ ಜತೆಗೆ ಶಿಸ್ತು ಮತ್ತು ಸಮಯ ಪಾಲನೆ ಅವಶ್ಯಕ ಎಂದು ಎಸ್‌ಎಸ್‌ಕೆಬಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಎವಲೆ ಹೇಳಿದರು.
ನಗರದ ಎಸ್‌ಎಸ್‌ಕೆ ಬಸವೇಶ್ವರ ಸ್ವತಂತ್ರ ಪಿಯು ಕಾಲೇಜು ಮತ್ತು ಕೋಮಲಾತಾಯಿ ಪಿಯು ಕಾಲೇಜು ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಿಯು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ೨೦೨೪ರ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳ ಸನ್ಮಾನ ಹಾಗೂ ನಿವೃತ್ತ ಪ್ರಾಧ್ಯಾಪಕರ ಸಾರ್ಥಕ ಸೇವೆಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಅಭ್ಯಾಸದ ಜತೆಗೆ ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಒಂದು ಗಂಟೆಯಾದರೂ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಡಿ.ಬಾಲಿಕಿಲೆ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಬೇಕಾದರೆ ಮಹಾವಿದ್ಯಾಲಯದ ಎಲ್ಲ ಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪಿಯು ಕಾಲೇಜುಗಳ ಸಮನ್ವಯಾಧಿಕಾರಿ ಡಾ.ವಿದ್ಯಾಧರ ಧುತ್ತರಗಿ, ಎಸ್‌ಎಸ್‌ಕೆಬಿ ಪಿಯು ಕಾಲೇಜಿನ ಪ್ರಾಚಾರ್ಯ ಸಿದ್ರಾಮಪ್ಪ ಎಸ್.ಮಾಲಿಪಾಟೀಲ್ ಮಾತನಾಡಿದರು.
ಅಕ್ಷತಾ ಸ್ವಾಗತಿಸಿದರು. ಲಕ್ಷ್ಮೀ ವಂದಿಸಿದರು. ರತ್ನಾ ಮತ್ತು ಮಯೂರಿ ನಿರೂಪಣೆ ಮಾಡಿದರು. ವರ್ಷಾ ಹಾಗೂ ರತ್ನಾ ಪ್ರಾರ್ಥನಾ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ೨೦೨೩-೨೪ನೇ ಶೈಕ್ಷಣಿಕ ಸಾಲಿನಲ್ಲಿ ಅಗ್ರಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕೋಮಲಾತಾಯಿ ಕಾಲೇಜೀನ ಪ್ರಾಚಾರ್ಯೆ ಡಾ.ಸ್ಮಿತಾ ಬಿರಾದಾರ, ಭಿಮಾಶಂಕರ ಬಿರಾದಾರ, ಸುನೀಲಕುಮಾರ ಹಾಲು, ಶರಣಬಸವ ಮಠಪತಿ, ಸುಮನ ರೆಡ್ಡಿ, ಸಕ್ಕುಬಾಯಿ ಬಂದೆ, ವಿಜಯಕುಮಾರಿ ಚಳಕಾಪುರೆ, ಗೋಕುಲಪ್ರಸಾದ ತಿವಾರಿ, ಸುಧಾರಾಣಿ ಪಾಟೀಲ್, ನಾರಾಯಣ ರುದ್ರೆ, ದಿವ್ಯಾ ಹಳ್ಳೆ, ಪೂಜಾ ಚಪಾತೆ, ಅಮರ, ಶಿಲ್ಪಾರಾಣಿ ಕಿಂಡಿಮಠ, ಅನೀಲಕುಮಾರ ಜೋಶಿ, ಸೂರ್ಯಕಾಂತ ನಾಸೆ, ಶ್ರೀಶೈಲ ಚಿಟ್ಟೆ ಇತರರಿದ್ದರು.