

ಬಸವಕಲ್ಯಾಣ: ವ್ಯಕ್ತಿಯ ಜೀವನದಲ್ಲಿ ಮಹತ್ವದ ಪಾತ್ರ ವಹಿಸುವ ಕ್ರೀಡೆಗಳು ಕ್ರಿಯಾಶೀಲ ಮತ್ತು ಆರೋಗ್ಯಕರ ಬದುಕಿಗೆ ಪೂರಕವಾಗಿವೆ ಎಂದು ಬಿಇಟಿ ನಿರ್ದೇಶಕ, ಬಿಕೆಇಸಿ ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ ಹೇಳಿದರು.
ನಗರದ ಬಿಇಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಡಿ ಸೋಮವಾರ ಹಮ್ಮಿಕೊಂಡಿರುವ ಎರಡು ದಿನದ ಕಲಬುರಗಿ ಅಂತರ್ ಕಾಲೇಜು ಮಟ್ಟದ ಟೇಬಲ್ ಟೆನಿಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅವರು, ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಸಂಜುಕುಮಾರ ಜಲ್ದೆ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡರೆ ಕೌಶಲಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಡಾ.ಸುದರ್ಶನ್, ಡಾ.ಅನೀಲ ಪಾಟೀಲ್, ಪ್ರೊ.ಸುವರ್ಣಲತಾ ಹಿರೇಮಠ, ಐಟಿಐ ಕಾಲೇಜಿನ ಪ್ರಾಚಾರ್ಯ ಪ್ರೊ.ಶಿವಕುಮಾರ ಎಚ್., ಪ್ರವೀಣ ಬೆಳಕೇರಿ, ಪಿಆರ್‌ಒ ಶಂಕರ ಅಗರಗಿ, ಗೋವಿಂದ ಕನಕಾ, ವಿಜಯಪುರ, ಬಾಗಲಕೋಟೆ, ಹೊಸಪೇಟ, ಬಳ್ಳಾರಿ, ಕಲಬುರಗಿ, ಬೀದರ್, ಭಾಲ್ಕಿ ಹಾಗೂ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜು ಕ್ರೀಡಾಪಟುಗಳು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರು ಇದ್ದರು.
ಉಪ ಪ್ರಾಚಾರ್ಯ ಅರುಣಕುಮಾರ ಯಲಾಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ದತ್ತಣ್ಣ ಮಂಟಗಿ ವಂದಿಸಿದರು. ವಿದ್ಯಾಸಾಗರ ಮೂಲಗೆ ನಿರೂಪಣೆ ಮಾಡಿದರು.