ಸೇವಾ ನಿಷ್ಠೆಯಿಂದ ಜೀವನದಲ್ಲಿ ನೆಮ್ಮದಿ

4BK1
Published on

ಬಸವಕಲ್ಯಾಣ: ತಳಬೋಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿ ಸೇವಾ ನಿವೃತ್ತಿ ಹೊಂದಿದ ರಾಜಕುಮಾರ ರೋಳೆ ಅವರನ್ನು ಗುರುವಾರ ಸನ್ಮಾನಿಸಿ, ಬೀಳ್ಕೊಡಲಾಯಿತು. ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ, ಎಸ್‌ಡಿಎಂಸಿ ಪದಾಧಿಕಾರಿಗಳು, ಗ್ರಾಮದ ಪ್ರಮುಖರು, ಗಣ್ಯರು ಸನ್ಮಾನಿಸಿದರು.
ಕ್ಷೇತ್ರ ಶಿಕ್ಷಣಾದಿಕಾರಿ ಸಿ.ಜಿ.ಹಳ್ಳದ ಮಾತನಾಡಿ, ಕರ್ತವ್ಯ ನಿಷ್ಠೆಯಿಂದ ನಿರ್ವಹಿಸಿದಾಗ ಜೀವನದಲ್ಲಿ ನೆಮ್ಮದಿ ಹಾಗೂ ಸಂತೃಪ್ತಿ ಕಾಣಲು ಸಾಧ್ಯ. ಸರಳತೆ ಮೈಗೂಡಿಸಿಕೊಂಡ ಶಿಕ್ಷಕ ರಾಜಕುಮಾರ ಸೇವಾ ಅವಧಿಯಲ್ಲಿ ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಗುರು ವಿದ್ಯಾವತಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಅಕ್ಕಣ್ಣ, ಪ್ರಮುಖರಾದ ಜಗನ್ನಾಥ ಪತಂಗೆ, ಮಲ್ಲಿಕಾರ್ಜುನ ಮೇತ್ರೆ, ಭೀಮಾಶಂಕರ ಅಡೆಪ್ಪ, ರಾಜಕುಮಾರ ನಂದೋಡೆ, ಅಂಬಣ್ಣ ಘಾಂಗ್ರೆ, ಮಾಧವ ಮಾನೆ, ಬಸವರಾಜ ಬಾಲಿಕಿಲೆ, ಲಕ್ಷö್ಮಣ ಹೆಂಬಾಡೆ, ಬಾಲಾಜಿ ಹಿಪ್ಪರಗೆ, ರಾಜಕುಮಾರ ಮೈಲಾರೆ, ವೀರೇಂದ್ರರೆಡ್ಡಿ, ರಮೇಶ ಉಮ್ಮಾಪುರೆ, ರಾಜಮತಿ ಕೋರಾಳೆ, ಮೀನಾಕ್ಷಿ ಜಾಧವ್ ಇತರರಿದ್ದರು.
ಭರತ ಹೆಂಬಾಡೆ ನಿರೂಪಣೆ ಮಾಡಿದರು. ಶಿವಶಂಕರ ಗೌರೆ ವಂದಿಸಿದರು. ಅಂಬಣ್ಣ ಪರಿಚಯ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net