ಜನ್ಮ ಸ್ಥಳದಿಂದ ಆಗಮಿಸಿದ ಬಸವಜ್ಯೋತಿ

Basavajyothi arrived from her birthplace
Basavajyothi arrived from her birthplace
Published on

ವಿಜಯಪುರ: ಬಸವ ಜಯಂತಿ ಆಂಗವಾಗಿ ವಿಶ್ವಗುರು ಬಸವಣ್ಣನವರ ಜನ್ಮ ಸ್ಥಳ ಬಸವನಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಹಮ್ಮಿಕೊಂಡಿದ್ದ ಬಸವಜ್ಯೋತಿ ಯಾತ್ರೆಗೆ ಮಂಗಳವಾರ ಮಧ್ಯರಾತ್ರಿ ಬಸವನಬಾಗೇವಾಡಿಯ ವಿರಕ್ತ ಮಠದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು.

ವಿಜಯಪುರ ಮೂಲದ, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ ಉದ್ಯಮಿ ಬಿ.ಬಿ. ಪಾಟೀಲ ನೇತೃತ್ವದಲ್ಲಿ ಯಾತ್ರೆ ನಡೆಯಿತು. ಬಸವೇಶ್ವರ ಜ್ಯೋತಿ ಯಾತ್ರೆ ಬಸನವಬಾಗೇವಾಡಿಯಿಂದ ಇಂಗಳೇಶ್ವರ, ಮಸಬಿನಾಳ ಮತ್ತು ಉಕುಮನಾಳ ಮಾರ್ಗವಾಗಿ ನಗರದ ಶಿವಗಿರಿವರೆಗೆ 42 ಕಿ.ಮೀ. ದೂರವನ್ನು ಬೆಂಗಳೂರಿನ ಜಗದೀಶ ದಮಾನಿಯಾ, ಸಂದೀಪ ಡಿಯೋ, ಮೋಹನ, ಪ್ರಸಾದ ಶೃಂಗೇರಿ ಮತ್ತು ಹುಬ್ಬಳ್ಳಿಯ ವಿವಿಟ್​, ವಿಸಿಜಿ ಗ್ರೂಪ್​ನ ಪ್ರವಿಣ ಚೌರ, ಶ್ರೀಕಾಂತ ಅಂಗಡಿ, ಸಂದೀಪ ಮಡಗೊಂಡ, ಸೋಮು ಮಠ, ವಿನಯ ಪಾಟೀಲ, ರು ಸಾಲೋಟಗಿ ಮತ್ತು ಕಲಬುರಗಿಯ ವೀರಣ್ಣ ಕೌಲಗಿ ಓಡುತ್ತ ಬಂದರು.

ವಿಜಯಪುರ ಸೈಕ್ಲಿಂಗ್​ ಗ್ರೂಪ್​ (ವಿಜಿಸಿ) ಸದಸ್ಯರಾದ ಅಬಕಾರಿ ಇಲಾಖೆ ಅಧೀಕ ಲಗಮಣ್ಣ ಸಲಗಾರೆ, ಧನುಷ್​, ಅಪ್ಪು ಭೈರಗೊಂಡ, ಅಮಿತ, ಅಪೇಾ, ಗುರುಶಾಂತ ಕಾಪಸೆ, ಸೋಮಶೇಖರ ಸ್ವಾಮಿ, ಮುತ್ತಣ್ಣ ಬಿರಾದಾರ, ಸಿದ್ದು ನಾಯ್ಕೋಡಿ, ಡಾ. ಶಂಕರಗೌಡ ಪಾಟೀಲ, ಡಾ. ರವಿ ಚೌಧರಿ ಹಾಗೂ ಅಮೋಸಿದ್ದ ಬಸನಾಳ ಅವರು ರಾತ್ರಿ ಇಡೀ ಸೈಕಲ್​ ತುಳಿಯುವ ಮೂಲಕ ಯಾತ್ರೆಗೆ ಸಾಥ್​ ನೀಡಿದರು.

ಇದುವರೆಗೆ ವಿಜಯಪುರಕ್ಕೆ ಸೀಮಿತವಾಗಿದ್ದ ಬಸವಯಾತ್ರೆಗೆ ವಿಸಿಜಿ ತಂಡದ ಸದಸ್ಯರು ಭಾಗವಹಿಸಿ ಯಾತ್ರೆಗೆ ಕಳೆ ತಂದರು. ಅಲ್ಲದೆ, ನೆರೆಯ ಬೆಳಗಾವಿ, ಕಲಬುರಗಿಯ ಓಟಗಾರರು ಭಾಗವಹಿಸಿದ್ದರು. ಮುಂದಿನ ಬಾರಿ ಭಕ್ತಿ ಭಂಡಾರಿ ಬಸವಣ್ಣ ಯಾತ್ರೆಯಲ್ಲಿ ಹೆಚ್ಚೆಚ್ಚು ಜನರು ಪಾಲ್ಗೊಳ್ಳುವಂತೆ ಮಾಡಲಾಗುವುದು ಎಂದು ವಿಸಿಜಿ ಸೈಕ್ಲಿಂಗ್​ ಗ್ರೂಪ್​ ಅಧ್ಯ ಡಾ. ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net