ಬಸವೇಶ್ವರರು ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಶ್ರಮಿಸಿದ ಮಹಾತ್ಮ

Basavajaya Mrityunjaya Sri, Masabinala, Anishta Kadhyam, Putthali, Basaveshwar, Basavanbagewadi,
ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಬಸವೇಶ್ವರ ಪುತ್ಥಳಿ ಅನಾವರಣ ಮಾಡಲಾಯಿತು. ಬಸವಜಯ ಮೃತ್ಯುಂಜಯ ಶ್ರೀಗಳು, ಸಿದ್ಧರಾಮ ಶ್ರೀಗಳು, ಶಂಕರಗೌಡ ಬಿರಾದಾರ ಇತರರಿದ್ದರು.
Published on

ಬಸವನಬಾಗೇವಾಡಿ: ಅಣ್ಣ ಬಸವಣ್ಣನವರು ಕೇವಲ ಲಿಂಗಾಯತರ ಸ್ವತ್ತಲ್ಲ. ಅವರು ಜಗತ್ತಿನ ಸ್ವತ್ತಾಗಿದ್ದಾರೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.

ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ರಾಷ್ಟ್ರೀಯ ಬಸವಸೈನ್ಯದ ಗ್ರಾಮ ಘಟಕದಿಂದ ಸೋಮವಾರ ಆಯೋಜಿಸಿದ್ದ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಳಮಟ್ಟದಿಂದ ಮೇಲ್ವರ್ಗದವರೆಗೆ ಎಲ್ಲರನ್ನು ಸಮಾನವಾಗಿ ಕಾಣುವ ಮೂಲಕ ಬಸವಣ್ಣನವರು ಸಮಾಜದಲ್ಲಿನ ಅನಿಷ್ಟ ಪದ್ಧತಿಗಳ ನಿರ್ಮೂಲನಕ್ಕೆ ನಾಂದಿ ಹಾಡಿದರು. ಅವರು ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗುವುದಿಲ್ಲ ಅವರು ಸಕಲ ಧರ್ಮದ ಉದ್ಧಾರಕರು ಎಂದು ಹೇಳಿದರು.

ದೇಶದ ಪ್ರತಿ ಗ್ರಾಮಗಳಲ್ಲಿ ಬಸವಣ್ಣನವರು ಹಾಗೂ ವೀರಮಾತೆ ಕಿತ್ತೂರು ಚನ್ನಮ್ಮನವರ ಪುತ್ಥಳಿ ಸ್ಥಾಪಿಸಬೇಕು. ಅವರ ಸಂದೇಶಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಮಸಬಿನಾಳದ ವಿರಕ್ತಮಠದ ಸಿದ್ಧರಾಮ ಶ್ರೀಗಳು ಮಾತನಾಡಿ, ಬಸವಣ್ಣನವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ. ತಮ್ಮ ವಚನ ಸಾಹಿತ್ಯದ ಮೂಲಕ ಅಂಧಕಾರ ಹೋಗಲಾಡಿಸಿ ಜ್ಞಾನದ ಬೆಳಕು ನೀಡಿದ್ದಾರೆ. ಅವರ ನಡೆ-ನುಡಿ ಹಾಗೂ ಅವರು ತೋರಿದ ಹಾದಿಯನ್ನು ನಾವೆಲ್ಲರೂ ಅನುಸರಿಸಬೇಕು ಎಂದು ಹೇಳಿದರು.

ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರಮೀಜಾ ಮೈರಾ ಅಧ್ಯಕ್ಷತೆ ವಹಿಸಿದ್ದರು. ಪಿಕೆಪಿಎಸ್ ಅಧ್ಯಕ್ಷ ರಾಜುಗೌಡ ಪಾಟೀಲ, ಗ್ರಾಪಂ ಸದಸ್ಯರಾದ ಶಿವಾನಂದ ಹಿರೇಮಠ, ಚಂದ್ರಶೇಖರ ಬೈಚಬಾಳ, ಅಶೋಕ ತೋಟದ, ಈರಣ್ಣ ಕೌಲಗಿ, ರವಿ ವೈಚಬಾಳ, ರವಿ ಕತ್ನಳ್ಳಿ, ಮುದಕಪ್ಪ ಮಡಗೊಂಡ ಇತರರಿದ್ದರು.
ಬಸವಸೈನ್ಯದ ಗ್ರಾಮ ಘಟಕದ ಅಧ್ಯಕ್ಷ ಪ್ರಶಾಂತ ಬೈಚಬಾಳ ಸ್ವಾಗತಿಸಿದರು. ಸೋಮಶೇಖರ ಕಾರಜೋಳ ನಿರೂಪಿಸಿದರು. ಅಭಿಷೇಕ ಸಿಂದಗಿ ವಂದಿಸಿದರು.

ಕಾರ್ಯಕ್ರಮಕ್ಕೂ ಮುಂಚೆ ಬಸವಣ್ಣನವರ ಪುತ್ಥಳಿ ಮೆರವಣಿಗೆಗೆ ಸಚಿವ ಶಿವಾನಂದ ಪಾಟೀಲ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net