

ಬಸವನಬಾಗೇವಾಡಿ: ಹನ್ನರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಿಸಿ ಸಮಾಜಕ್ಕೆ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಷ್ಟೀಯ ಬಸವಸೈನ್ಯ ಸಂಟನೆ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹೂಗಾರ ಮಾದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಣ್ಣನವರ ಸಮಕಾಲೀನರಾಗಿ ಜನ್ಮ ತಾಳಿದ ಹೂಗಾರ ಮಾದಯ್ಯನವರ ಬದುಕು, ಜೀವನ, ಕಾರ್ಯಮತೆ ಸಮಾಜಕ್ಕೆ ಸಂದೇಶವಾಗಿದೆ.
ಶರಣ ಹೂಗಾರ ಮಾದಯ್ಯ ದಂಪತಿ ಕಾಯಕ ನಿಷ್ಠೆಯ ಜೀವನ ಪದ್ಧತಿ ಹೊಂದಿದ್ದರು. ದಂಪತಿಗಳಿಬ್ಬರೂ ಬಸವಣ್ಣನವರ ಕಲ್ಯಾಣದಲ್ಲಿ ಸುಪ್ರಭಾತದ ಸಮಯದಲ್ಲಿ ಮನೆ ಮನೆಗೆ ತೆರಳಿ ಹೂವು, ಪತ್ರಿ, ಹೂಮಾಲೆಯನ್ನು ಕೊಡುವ ಕಾಯಕ ಮಾಡುತ್ತಿದ್ದರು. ಅವರ ಕಾಯಕ ನಿಷ್ಠೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದ್ದು, ಅವರ ಸಂದೇಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯ ಬಸಣ್ಣ ದೇಸಾಯಿ, ರಾಷ್ಟ್ರೀಯ ಬಸವಸೈನ್ಯದ ಮುಖಂಡರಾದ ಶ್ರೀಕಾಂತ ಕೊಟ್ರಶೆಟ್ಟಿ, ಸುನೀಲ ಚಿಕ್ಕೊಂಡ, ಜಟ್ಟಿಂಗರಾಯ ಮಾಲಗಾರ, ಸುರೇಶ ಹೂಗಾರ, ಪ್ರಶಾಂತ ಮುಂಜಾನೆ, ರವಿ ರಾಠೋಡ, ಲಾಲು ಕೊರಬು, ನೀಲಕಂಠ ಹೂಗಾರ, ಮಲ್ಲಿಕಾರ್ಜುನ ಜೀರ, ಬಸವರಾಜ ಹೂಗಾರ, ಶಿದ್ದಪ್ಪ ಹೂಗಾರ, ಬಸವರಾಜ ಹೂಗಾರ, ರಾವೇಂದ್ರ ಹೂಗಾರ, ಆನಂದ ಜೀರ್, ಅಬ್ದುಲ ತಂಬದ ಇತರರಿದ್ದರು.