

ಹೊನ್ನಾಳಿ: 12ನೇ ಶತಮಾನದ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ದೊಡ್ಡ ಕ್ರಾಂತಿಯನ್ನೇ ಹುಟ್ಟು ಹಾಕಿದರು ಎಂದು ತಹಸೀಲ್ದಾರ್ ಪಟ್ಟರಾಜಗೌಡ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮೊದಲಾದ ಬದಲಾವಣೆಗಳನ್ನು ಅಂದಿನ ಕಾಲದಲ್ಲೇ ಕಾಣುತ್ತೇವೆ. ಅದಕ್ಕೆ ಕಾರಣ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ದೇವರ ದಾಸಿಮಯ್ಯ. ನಾವು ಮೊದಲು ದಾಸಿಮಯ್ಯನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಉಪನ್ಯಾಸಕ ಡಾ.ಶಿವಪ್ಪ ಮಾತನಾಡಿ, ಆದ್ಯ ವಚನಕಾರ, ವಚನ ಸಾಹಿತ್ಯದ ಪ್ರವರ್ತಕ ಮತ್ತು ವಚನ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮೊದಲ ಧಾರ್ವಿುಕ ದಾರ್ಶನಿಕ ದೇವರ ದಾಸಿಮಯ್ಯ ಎಂದು ತಿಳಿಸಿದರು.
ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಸೃಷ್ಟಿಯಾದ ಸಾಹಿತ್ಯವನ್ನು ಮೊದಲು ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಮೊದಲ ವಚನಕಾರ ಎಂದರು.
ನೇಕಾರರ ಸಂಘದ ತಾಲೂಕು ಅಧ್ಯಕ್ಷ ದಿಡಗೂರು ಹನುಮಂತಪ್ಪ, ಕುಂದೂರು ಆಂಜನಪ್ಪ, ಸುರಹೊನ್ನೆ ಗಂಗಪ್ಪ ಹಾಗೂ ದೇವಾಂಗ ಸಂಘದ ಪ್ರಮುಖರು ಉಪಸ್ಥಿತರಿದ್ದರು.