ಮೌಢ್ಯಾಚರಣೆ ತಡೆಗೆ ಮನೆಮನೆಗೆ ವಚನಜ್ಯೋತಿ ಕಾರ್ಯಕ್ರಮ ಆಯೋಜನೆ

VACHANA JYOTI
ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದಲ್ಲಿ ಮನೆಮನೆಗೆ ವಚನ ಜ್ಯೋತಿ ಕಾರ್ಯಕ್ರಮದ ಲಿಂಗಪೂಜೆಯಲ್ಲಿ ರಾಷ್ಟ್ರೀಯ ಬಸವದಳದ ಅಧ್ಯಕ್ಷ ರೇಣುಕಪ್ಪ ಮಂತ್ರಿ, ಕಾರ್ಯದರ್ಶಿ ಬಸವರಾಜ ಹೂಗಾರ, ಶರಣಮ್ಮ ಹೊಸಳ್ಳಿ, ಬಸಣ್ಣ, ಜಗದೀಶ ಇದ್ದರು.
Published on

ಯಲಬುರ್ಗಾ: ಜನರಿಂದ ಲಿಂಗಪೂಜೆ, ವಚನಪಠಣ ಮಾಡಿಸಿ, ಅನುಭಾವದ ಅಮೃತದ ನುಡಿಗಳನ್ನು ತಿಳಿಸುವ ಮೂಲಕ ಶರಣರ ಸಂದೇಶವನ್ನು ಬಿತ್ತರಿಸಲಾಗುತ್ತಿದೆ ಎಂದು ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಬಸವರಾಜ ಹೂಗಾರ ಹೇಳಿದರು.

ತಾಲೂಕಿನ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕನಾಗಲಾಂಬಿಕೆ ಗಣ ಶ್ರಾವಣ ಮಾಸ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಮನೆ ಮನೆಗೆ ವಚನ ಜ್ಯೋತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ವರ್ಷದಂತೆ ಶ್ರಾವಣ ಮಾಸದ ನಿಮಿತ್ತ ಆ.21ರಿಂದ ಒಂದು ತಿಂಗಳ ಕಾಲ ಬಸವಣ್ಣನವರ ಭಾವಚಿತ್ರದೊಂದಿಗೆ ವಚನಕಟ್ಟು ಹೊತ್ತು ಮನೆ ಮನೆಗೆ ತೆರಳಿ ವಚನಜ್ಯೋತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಶರಣರ ಅನುಭಾವ ತಿಳಿಸುವ ಮೂಲಕ ಕಲ್ಲು ನಾಗರ ಮೂರ್ತಿಗೆ ಹಾಲೆರೆಯುವ ಮೌಢ್ಯ ಆಚರಣೆ ತಡೆದು, ನಿಜ ಆಚರಣೆ ಸಾರುವ ಹಲವಾರು ವಚನಗಳ ತಿರುಳನ್ನು ತಿಳಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ದಳದ ಅಧ್ಯಕ್ಷ ರೇಣುಕಪ್ಪ ಮಂತ್ರಿ ನಮ್ಮ ಜೀವನದಲ್ಲಿ ನಯ, ವಿನಯತೆ, ಸುಸಂಸ್ಕೃತ ಮೌಲ್ಯಗಳ ಬದುಕು ಕಟ್ಟಿಕೊಳ್ಳಲು ವಚನಗಳು ದಾರಿದೀಪವಾಗಿವೆ. ಯಾಂತ್ರಿಕತೆಯಲ್ಲಿ ಕಳೆದುಹೋಗುವ ಸಮಯದಲ್ಲಿ ವಚನಗಳ ಅಮೃತಸವಿ ಉಣಬಡಿಸುತ್ತೇವೆ. ಸಮ ಸಮಾಜದ ನಿರ್ಮಾಣಕ್ಕೆ ಪೂರಕವಾದ ವಚನಗಳನ್ನು ಮನೆ ಮನಕ್ಕೆ ಮುಟ್ಟಿಸುವ ವಚನ ಶ್ರಾವಣ ಬಹು ಅರ್ಥಪೂರ್ಣವಾಗಿದೆ ಎಂದು ಹೇಳಿದರು.

ಅಕ್ಕನಾಗಲಾಂಬಿಕೆ ಮಹಿಳಾ ಗಣದ ಸಾವಿತ್ರಮ್ಮ ದೇವೇಂದ್ರಪ್ಪ ಆವಾರಿ, ಶಂಕ್ರಮ್ಮ ಹೊಸಳ್ಳಿ, ಚೆನ್ನಮ್ಮ ಮಂತ್ರಿ, ಗುರಲಿಂಗಮ್ಮ ಮಂತ್ರಿ, ನಿಂಗಮ್ಮ ಕೋಳೂರು, ನಾಗಮ್ಮ ಜಾಲಿಹಾಳ, ಹಂಪಮ್ಮ ಮೇಟಿ, ಶರಣಮ್ಮ ಹೊಸಳ್ಳಿ, ಪ್ರಮುಖರಾದ ಬಸವಣ್ಣ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ಜಗದೀಶ ಮೇಟಿ, ಶಿವಪುತ್ರಪ್ಪ ಉಚ್ಚಲಕುಂಟಿ, ಲಿಂಗನಗೌಡ ದಳಪತಿ, ಮಲ್ಲಿಕಾರ್ಜುನ ಮಂತ್ರಿ, ಯಮನೂರಪ್ಪ ಕೋಳೂರು ಹನಮೇಶ ಹೊಸಳ್ಳಿ, ಶಾಂತಪ್ಪ ಹೊಸಳ್ಳಿ, ಚನ್ನಬಸವಣ್ಣ ನಿಡಶೇಸಿ, ಗಿರಿಮಲ್ಲಪ್ಪ ಪರಂಗಿ ಸೋಮಣ್ಣ ಮಂತ್ರಿ, ಬಸವರಾಜ ಹೊಸಳ್ಳಿ, ವಿರುಪಣ್ಣ ಮಂತ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net