

ಬಸವನಬಾಗೇವಾಡಿ: ಸಮಾಜದ ಋಣ ತೀರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಕೆಲಸ ಮಾಡಬೇಕೆಂದು ವಿಜಯಪುರದ ದಾನೇಶ್ವರಿ ಡೈಗ್ನೊಸ್ಟಿಕ್ ಕೇಂದ್ರದ ಕ್ಷ-ಕಿರಣ ತಜ್ಞ ಡಾ. ರಾಜಶೇಖರ ಮುಚ್ಚಂಡಿ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಹಂಗರಗಿ ಚನ್ನಬಸವೇಶ್ವರ ಪ್ರತಿಷ್ಠಾನದ 7ನೇ ವಾರ್ಷಿಕೋತ್ಸ ನಿಮಿತ್ತ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷಚಂದ್ರ ಬೋಸ್ ಜಯಂತಿ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಾದವರು ಕಲಿಕೆಯ ಜತೆಗೆ ಸಾಮಾಜಿಕ ಕಾರ್ಯಕ್ಕೆ ಒತ್ತು ಕೊಡಬೇಕು. ವೈದ್ಯಕೀಯ ವೃತ್ತಿಯಲ್ಲಿ ಪ್ರಾಮಾಣಿಕತೆ ಬಹುಮುಖ್ಯವಾಗಿದೆ ಎಂದರು.
ಶಿಕ್ಷಕ ಅಶೋಕ ಹಂಚಲಿ, ಪುಸ್ತಕ ಪ್ರಾಧಿಕಾರ ಸದಸ್ಯ ಸಂಗಮೇಶ ಪೂಜಾರಿ ಮಾತನಾಡಿದರು. ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಪ್ರತಿಷ್ಠಾನದ ಅಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿದರು. ನೃತ್ಯ ಕಲಾವಿದೆ ಶ್ರೀದೇವಿ ರೂಢಗಿ, ಕೆ.ಪಿ. ಕುಲಕರ್ಣಿ, ವಿ.ಬಿ. ಮರ್ತೂರ, ಶ್ರೀನಿವಾಸ ಕುಲಕರ್ಣಿ, ಭೀಮು ಲಮಾಣಿ ಸೇರಿದಂತೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಸಾವಿತ್ರಿ ಕಲ್ಯಾಣಶೆಟ್ಟಿ ಉಪಸ್ಥಿತರಿದ್ದರು. ಡಾ. ಯುವರಾಜ ಮಾದನಶೆಟ್ಟಿ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಮುತ್ತು ಪತ್ತಾರ, ಶಿವು ಮುತ್ತಗಿ ನಿರೂಪಿಸಿದರು. ಆರ್.ಜಿ. ಅಳ್ಳಗಿ ವಂದಿಸಿದರು.