ಏ.೧೫ ರಂದು ಬಸವ ಯೋಗಾಶ್ರಮದ ನಾಲ್ಕನೇ ವಾರ್ಷಿಕೋತ್ಸವ

RAICHUR
RAICHUR,
Published on

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಗೀರ ಜಾಡಲದಿನ್ನಿ ನೀಲಾಂಭಿಕ ಬಸವ ಯೋಗಾಶ್ರಮದ ನಾಲ್ಕನೇ ವಾರ್ಷಿಕೋತ್ಸವ, ಶರಣ ವಚನ ವಿಜಯೋತ್ಸವ ಹಾಗೂ ಬಸವತತ್ವ ಚಿಂತನಾಗೋಷ್ಟಿ ಕಾರ್ಯಕ್ರಮವನ್ನು ಏ.೧೫ ರಂದು ಆಯೋಜಿಸಲಾಗಿದೆ ಎಂದು ಯೋಗಾಶ್ರಮದ ಅಧ್ಯಕ್ಷ ವೀರಭದ್ರ ಸ್ವಾಮೀಜಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾತನಾಡಿ, ಕಾರ್ಯಕ್ರಮದಲ್ಲಿ ಇಳಕಲ್ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಡಾ.ಮಹಾಂತ ಶಿವಯೋಗಿಗಳು, ಬೀದರ್ ಹಲಸೂರುಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು, ಚಿತ್ರದುರ್ಗದ ಸಿದ್ದಯ್ಯನಕೋಟೆ ಚಿತ್ತರಗಿ ಮಹಾಂತೇಶ್ವರ ಸಂಸ್ಥಾನ ಶಾಖಾ ಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ.

೧೨ ನೇ ಶತಮಾನದ ಬಸವವಾದಿ ಶಿವಶರಣ ಕುರಿತು ವಿಚಾರ ಗೋಷ್ಟಿ ನಡೆಯಲಿದೆ. ದೇವದುರ್ಗ ಶಾಸಕಿ ಕರೆಮ್ಮ ನಾಯಕ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಕೆ.ಶಿವನಗೌಡ ನಾಯಕ ಇವರನ್ನು ಸನ್ಮಾನಿಸಲಾಗುತ್ತದೆ. ಶ್ರೀದೇವಿ ನಾಯಕ, ರೂಪಾ ಶ್ರೀನಿವಾಸ ನಾಯಕ ಸೇರಿ ಅನೇಕರು ಆಗಮಿಸಲಿದ್ದಾರೆ ಎಂದರು.

ಈ ಸಂದರ್ಬದಲ್ಲಿ ಬೆಟ್ಟಪ್ಪ ಕಸ್ತೂರಿ, ಅಮರಣ್ಣ ಸಾಹುಕಾರ, ನಾಗರಾಜ ಅಬಕಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net