ಸಮಾಜ ಸುಧಾರಿಸಿದ ಬಸವ

Basava, who improved society
ಮುಧೋಳ ತಾಲೂಕಿನ ಮುಗಳಖೋಡದ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಶ್ರಾವಣ ಸಂಭ್ರಮ ಅಂಗವಾಗಿ ಶನಿವಾರ ಬಸವ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಿದ್ದಯ್ಯ ಸ್ವಾಮಿಗಳು, ಮಹಾಲಿಂಗಯ್ಯ ಸ್ವಾಮಿಗಳು, ಪಿ.ಬಿ. ಸುನಗಾರ ಇದ್ದರು.
Published on

ಮುಧೋಳ: ಹನ್ನೆರಡನೆಯ ಶತಮಾನದಲ್ಲಿ ಸಮಾನತೆ ಎಂಬುದು ಪರಕೀಯದ ವಿಷಯವಾಗಿತ್ತು. ಸಮಾಜ ಸುಧಾರಣೆ, ಧರ್ಮ ಸುಧಾರಣೆ ಕೇಳಲು ಸಾಧ್ಯವಿಲ್ಲ ಎನ್ನುವ ಕಾಲ ಅದಾಗಿತ್ತು. ಅಂತಹ ದಿನಗಳಲ್ಲಿ ಜನಿಸಿ ಬೆಳೆದ ಬಸವಣ್ಣ ಸಕಲರ ಧರ್ಮವನ್ನು ಸಕಲರಿಗಾಗಿ ಒದಗಿಸುವ ದೀಕ್ಷೆಗೆ ಬದ್ಧರಾಗಿದ್ದರು ಎಂದು ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯಪಟ್ಟರು.

ತಾಲೂಕಿನ ಸುಕ್ಷೇತ್ರ ಮುಗಳಖೋಡದ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಶ್ರಾವಣ ಸಂಭ್ರಮ ಅಂಗವಾಗಿ ಶನಿವಾರ ಬಸವ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬಸವಣ್ಣ ಹೇಳಿದ ಆಚರಣೆ ಅನುಷ್ಠಾನಕ್ಕೆ ಬಂದಾಗ ನಮ್ಮ ನಾಡು ಕಲ್ಯಾಣ ಕರ್ನಾಟಕ ಆಗುತ್ತದೆ ಎಂದರು. ಸಿದ್ದಯ್ಯ ಸ್ವಾಮಿಗಳು, ಮಹಾಲಿಂಗಯ್ಯ ಸ್ವಾಮಿಗಳು, ಆಶ್ರಮದ ಕುಮಾರ ಗುರುಪ್ರಸಾದ ಸ್ವಾಮಿಗಳು, ಗ್ರಾಮ ಪಂಚಾಯಿತಿ ಸದಸ್ಯ ಪಿ. ಬಿ. ಸುನಗಾರ, ಹಿರಿಯ ಜನಪದ ಕಲಾವಿದರಾದ ಮುತ್ತವ್ವ ಲಕ್ಷ್ಮೇಶ್ವರ, ಬೌರಮ್ಮ ಹಿರೇಮಠ, ಅಖಿಲಾಂಡೇಶ್ವರಿ ಸಂಘದ ದ್ರಾಕ್ಷಾಯಿಣಿ ಎಂ.ಕೆ. ಉಪಸ್ಥಿತರಿದ್ದರು. ಲೋಕ ನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಎಲ್. ಶಾಮಲಾ ಸ್ವಾಗತಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net