ಬಸವ ತತ್ತ್ವ ಚಾಚೂ ತಪ್ಪದೆ ಅನುಸರಿಸಲಿ

3
ಸವದಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಶರಣ ಸಂಸ್ಕೃತಿ ಮಹೋತ್ಸವದಲ್ಲಿ ಬಸವ ಬುತ್ತಿ ಪ್ರಸಾದಕ್ಕೆ ಶ್ರೀಗಳು ಚಾಲನೆ ನೀಡಿದರು. ಬಸವಲಿಂಗ ಸ್ವಾಮೀಜಿ, ಗುರು ಮಹಾಂತ ಸ್ವಾಮೀಜಿ, ಸಂಗಮೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ ಇತರರಿದ್ದರು.
Published on

ನಂದೇಶ್ವರ: ಲಿಂ.ಡಾ.ಮಹಾಂತ ಶಿವಯೋಗಿಗಳು ಬಸವ ತತ್ವಗಳನ್ನು ದೇಶಾದ್ಯಂತ ಪ್ರಸಾರ ಮಾಡಿ ನುಡಿದಂತೆ ನಡೆದಿದ್ದಾರೆ. ಬಸವ ತತ್ವಗಳ ಉಳಿವಿಗಾಗಿ ಜೀವದ ಹಂಗು ತೊರೆದು ಹೋರಾಡಿದ್ದಾರೆ. ಬಸವ ತತ್ವಗಳನ್ನು ಯಾರು ಗೌರವಿಸುತ್ತಾರೋ ಅವರನ್ನು ವಿಶ್ವವೇ ಗೌರವಿಸುತ್ತದೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದರು.

ಸಮೀಪದ ಸವದಿ ಗ್ರಾಮದ ಶ್ರೀ ಸಂಗನ ಬಸವ ಮಠದಲ್ಲಿ ಗುರುವಾರ ಜರುಗಿದ ಶರಣ ಸಂಸ್ಕೃತಿ ಮಹೋತ್ಸವದ ಧ್ವಜಾರೋಹಣ ಹಾಗೂ ಬಸವ ಬುತ್ತಿ ಪ್ರಸಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗುರುಹಿರಿಯರನ್ನು ಪ್ರತಿಯೊಬ್ಬರೂ ಭಕ್ತಿ ಭಾವದಿಂದ ಕಾಣಬೇಕು. ಬಸವ ತತ್ತ್ವಗಳನ್ನು ಚಾಚೂ ತಪ್ಪದೇ ಅನುಸರಿಸಬೇಕು ಎಂದರು.

ಸವದಿ- ಇಳಕಲ್ ಮಠದ ಗುರು ಮಹಾಂತ ಸ್ವಾಮೀಜಿ ಮಾತನಾಡಿ, ದಾಸೋಹ ಕಾಯಕ ಸೇವೆ ಸಲ್ಲಿಸುತ್ತಿರುವ ಗ್ರಾಮದ ಭಕ್ತರು ಹೃದಯ ಶ್ರೀಮಂತರು ಎಂದರು.

ವಿಜಯಪುರ ಜ್ಞಾನ ಯೋಗಾಶ್ರಮದ ಸಂಗಮೇಶ್ವರ ಸ್ವಾಮೀಜಿ, ತಿಕೋಟಾದ ಮಲ್ಲಿಕಾರ್ಜುನ ಸ್ವಾಮೀಜಿ, ನಿಪ್ಪಾಣಿಯ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಬಸವ ಕೇಂದ್ರದ ಅಧ್ಯಕ್ಷ ಬಸವರಾಜ ಪಾಟೀಲ, ಉಪಾಧ್ಯಕ್ಷ ಅಪ್ಪಾಲಾಲ ಪಾರ್ಥನಳ್ಳಿ ಇತರರಿದ್ದರು. ಪ್ರಕಾಶ ಪಾಟೀಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net