ಬಸವ ಸ್ತೋತ್ರದ ಪುಸ್ತಕ ಮೆರವಣಿಗೆ

Basava Stotra book procession
Published on

ಗಜೇಂದ್ರಗಡ: ಪಟ್ಟಣದಲ್ಲಿ ಶ್ರೀ ಅನ್ನದಾನೇಶ್ವರ ಮಠ ಹಾಲಕೆರೆ- ಗಜೇಂದ್ರಗಡ ವತಿಯಿಂದ ಆಯೋಜಿಸಿರುವ ಬಸವ ಪುರಾಣ ಮಂಗಲೋತ್ಸವ ಅಂಗವಾಗಿ 3 ಸಾವಿರಕ್ಕೂ ಅಧಿಕ ಶರಣೆಯರಿಂದ ಬಸವ ಸ್ತೋತ್ರದ ಪುಸ್ತಕ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಪಟ್ಟಣದ ಮೈಸೂರು ಮಠದಿಂದ ಪ್ರಾರಂಭವಾದ ಮೆರವಣಿಗೆಗೆ ಮಾಜಿ ಸಂಸದ ಆರ್.ಎಸ್. ಪಾಟೀಲ ಚಾಲನೆ ನೀಡಿದರು. ಮೆರವಣಿಗೆಗೆ ಮಂಡ್ಯದ ಪೂಜಾ ಕುಣಿತ, ನಂದಿಕೋಲು, ಡೊಳ್ಳು ಸೇರಿ ವಿವಿಧ ವಾದ್ಯ ಮೇಳಗಳು ಸಾಥ್ ನೀಡಿದವು. ವಚನ ಗ್ರಂಥ ತನ್ನ ಮೇಲೆ ಹೊತ್ತಿದ್ದ ಹಂಪಿಯ ಲಕ್ಷ್ಮೀ ಆನೆ ಎಲ್ಲರ ಗಮನ ಸೆಳೆಯಿತು.

ಒಳಬಳ್ಳಾರಿಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿ, ಹಾಲಕೆರೆಯ ಶ್ರೀ ಮುಪ್ಪಿನಬಸವಲಿಂಗ ಸ್ವಾಮೀಜಿ, ಗರಗನಾಗಲಾಪುರದ ಶ್ರೀನಿರಂಜನಪ್ರಭು ಸ್ವಾಮೀಜಿ, ದರೂರಿನ ಶ್ರೀ ಕೊಟ್ಟೂರು ಸ್ವಾಮೀಜಿ, ಶ್ರೀಧರಗಡ್ಡೆಯ ಶ್ರೀ ಮರಿಕೊಟ್ಟೂರು ದೇಶಿಕರು, ಸೋಮಸಮುದ್ರದ ಶ್ರೀ ಸಿದ್ಧಲಿಂಗ ದೇಶಿಕರು, ಬಸವಕಲ್ಯಾಣದ ಶ್ರೀಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವೀರಶೈವ ಲಿಂಗಾಯತ ಸಮಾಜ ಗಜೇಂದ್ರಗಡ- ಉಣಚಗೇರಿ ಅಧ್ಯಕ್ಷ ಸಿದ್ದಣ್ಣ ಬಂಡಿ, ಯುವ ಘಟಕದ ಅಧ್ಯಕ್ಷ ಅಪ್ಪು ಮತ್ತಿಕಟ್ಟಿ, ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಪುರಸಭೆ ಸದಸ್ಯರಾದ ಮುರ್ತುಜಾ ಡಾಲಾಯತ, ರಾಜು ಸಾಂಗ್ಲಿಕರ, ಪ್ರಭು ಚವಡಿ, ಶಿವಕುಮಾರ ಕೊರಧಾನ್ಯಮಠ, ಮಹಾಂತೇಶ ಸೋಮನಕಟ್ಟಿ, ಟಿ.ಎಸ್. ರಾಜೂರು, ಬಸವರಾಜ ಬೇಲೇರಿ, ಮುತ್ತಣ್ಣ ಮ್ಯಾಗೇರಿ, ಎ.ಪಿ. ಗಾಣಿಗೇರ, ಬಸವರಾಜ ಚನ್ನಿ, ಅಂದಪ್ಪ ಸಂಕನೂರ, ಅಮರಯ್ಯ ಗೌರಿಮಠ, ಬಾಬು ಪವಾರ, ಬಸವರಾಜ ಪುರ್ತಗೇರಿ, ಅವಿನಾಶ ಮತ್ತಿಕಟ್ಟಿ, ಮಹಾಂತೇಶ ಪವಾರ ಸೇರಿ 15 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net