ಬಸವ ಸ್ತೋತ್ರದ ಪುಸ್ತಕ ಮೆರವಣಿಗೆ

25 GJD 2
Published on

ಗಜೇಂದ್ರಗಡ: ಪಟ್ಟಣದಲ್ಲಿ ಒಂದು ತಿಂಗಳ ಕಾಲ ಜರುಗಿದ ಬಸವ ಪುರಾಣವನ್ನು ಅರ್ಥಗರ್ಭಿತವಾಗಿ ಮಂಗಲ ಮಾಡುವ ಉದ್ದೇಶದಿಂದ ಡಿ.26 ರಂದು ಬಸವ ಸ್ತೋತ್ರದ ಪುಸ್ತಕ ಮೆರವಣಿಗೆ ಆಯೋಜಿಸಲಾಗಿದೆ ಎಂದು ಹಾಲಕೆರೆ ಅನ್ನದಾನೇಶ್ವರ ಮಠದ ಪೀಠಾಧ್ಯಕ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಪುರ್ತಗೇರಿ ಕ್ರಾಸ್​ನಲ್ಲಿರುವ ಶ್ರೀ ಅನ್ನದಾನೇಶ್ವರ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪುರಾಣ ಮಂಗಲೊತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಡಿ.27,28 ರಂದು ಪಟ್ಟಣದಲ್ಲಿ ಅಕ್ಷರ ಉತ್ಸವ ನಡೆಯಲಿದ್ದು, ವಿಜ್ಞಾನ ವಸ್ತು ಪ್ರದರ್ಶನ , ಸಂಸ್ಕೃ›ತಿ, ಆಹಾರ, ಅಕ್ಷರ, ವಿಜ್ಞಾನ ಉಳಿಸುವ ದೆಶೆಯಲ್ಲಿ ಅಕ್ಷರ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.

ಬಸವ ಪುರಾಣದ ಕಾರ್ಯಾಧ್ಯಕ್ಷ ಸಿದ್ದಣ್ಣ ಬಂಡಿ ಮಾತನಾಡಿ, ಡಿ.26 ರಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ಹಾಲಕೆರೆಯಿಂದ ಬಸವ ಪುರಾಣದ ಉತ್ಸವ ಪಟ್ಟಣದ ಮೈಸೂರ ಮಠಕ್ಕೆ ಆಗಮಿಸಲಿದ್ದು, ಅಲ್ಲಿಂದ ಮೆರವಣಿಗೆಗೆ ಮಾಜಿ ಸಂಸದ ಆರ್.ಎಸ್. ಪಾಟೀಲ ಚಾಲನೆ ನೀಡುವರು. ಮೆರವಣಿಗೆಯಲ್ಲಿ 25 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವರು. ಮಂಡ್ಯದ ಪೂಜಾ ಕುಣಿತ, ವೀರಗಾಸೆ, ನಂದಿಕೋಲು ಸೇರಿದಂತೆ ವಿವಿಧ ವಾದ್ಯಮೇಳಗಳು ಮೆರವಣಿಗೆಗೆ ಮೆರಗು ನೀಡಲಿವೆ ಎಂದರು.

ಸಂಜೆ 6 ಗಂಟೆಗೆ ಪುರಾಣ ಮಂಗಲೋತ್ಸವ ನಡೆಯಲಿದೆ. ಮೂರುಸಾವಿರ ಮಠದ ಶ್ರೀ ಡಾ.ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಮೈಸೂರುಮಠದ ವಿಜಯಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಶಾಸಕರಾದ ಜಿ.ಎಸ್. ಪಾಟೀಲ, ನೇಮಿರಾಜ ನಾಯ್ಕ, ಮಾಜಿ ಸಚಿವ ಕಳಕಪ್ಪ ಬಂಡಿ, ವಿಪ ಸದಸ್ಯ ಎಸ್.ವಿ. ಸಂಕನೂರ, ವಿಜಯಪುರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಇತರರು ಪಾಲ್ಗೊಳ್ಳುವರು ಎಂದರು.

ಗರಗ ನಾಗಲಾಪೂರದ ನಿರಂಜನಪ್ರಭು ಸ್ವಾಮೀಜಿ, ದರೂರಿನ ಕೊಟ್ಟೂರು ಸ್ವಾಮೀಜಿ, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇಶಿಕರು, ಸೋಮಸಮುದ್ರದ ಸಿದ್ಧಲಿಂಗ ದೇಶಿಕರು, ಬಸವಕಲ್ಯಾನದ ಶಿವಲಿಂಗ ಸ್ವಾಮೀಜಿ, ಎ.ಪಿ. ಗಾಣಿಗೇರ, ಪ್ರಭು ಚವಡಿ, ನಾಗಯ್ಯ ಗೊಂಗಡಶೆಟ್ಟಿಮಠ, ಶರನಪ್ಪ ಬೆಟಗೇರಿ, ಪ್ರಭು ಹಿರೇಮಠ, ಬಸಂತರಾವ್ ಗಾರಗಿ, ಕಳಕಯ್ಯ ಸಾಲಿಮಠ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net