

ಬೇಲೂರು : ಕೇವಲ ಪ್ರತಿಮೆಗಳನ್ನು ಸ್ಥಾಪಿಸಲು ಮಾತ್ರ ನಮ್ಮ ಉದ್ದೇಶ ಸೀಮಿತವಾಗಬಾರದು ಎಂದು ಹಳೇಬೀಡು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ
ಅನಾವರಣಗೊಳಿಸಿ ಅವರು ಮಾತನಾಡಿದರು.
ಸಮ ಸಮಾಜ ನಿರ್ಮಾಣ:ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, 12ನೇ ಶತಮಾನದಲ್ಲಿ ಸಮಾಜದಲ್ಲಿ ಅಡಗಿದ್ದ ಅನಿಷ್ಠ
ಪದ್ಧತಿಗಳನ್ನು ವಿರೋಧಿಸಿ ಸಮ ಸಮಾಜ ನಿರ್ಮಾಣಕ್ಕೆ ಮುಂದಾದ ಬಸವೇಶ್ವರರ ಪುತ್ಥಳಿ
ಸ್ಥಾಪಿಸಿರುವುದು ಮಾದರಿ ಕಾರ್ಯ ಎಂದರು.ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಬಸವಣ್ಣನವರು ಯಾವುದೇ ಜಾತಿ, ಧರ್ಮ ಎನ್ನದೆ ಎಲ್ಲ ಜನರನ್ನು ಪ್ರೀತಿಸಿದರು. ಹಾಗಾಗಿ ಅವರು ಜಗಜ್ಯೋತಿ ಆದರು ಎಂದರು.
ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಪುರಸಭೆ ಅಧ್ಯಕ್ಷೆ ಮೀನಾಕ್ಷಿ, ಮಾಜಿ ಅಧ್ಯಕ್ಷರಾದ ಎಂ.ಆರ್.ವೆಂಕಟೇಶ್, ತೀರ್ಥಕುಮಾರಿ ವೆಂಕಟೇಶ್, ಕೇಂದ್ರ ತೆಂಗು, ನಾರು ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರೇಣುಕುಮಾರ್, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ರವಿಕುಮಾರ್, ಯುವ ಅಧ್ಯಕ್ಷ ಚೇತನ್, ಮುಖಂಡರಾದ ಕೊರಟಿಕೆರೆ ಪ್ರಕಾಶ್, ಎಂ.ಎ.ನಾಗರಾಜ್, ನಟರಾಜ್, ಬಿ.ಡಿ.ಚಂದ್ರೇಗೌಡ, ಬಳ್ಳೂರು ಉಮೇಶ್ ಇತರರಿದ್ದರು.