ಶಿವಸ್ಮರಣೆಯಿಂದ ದೇಹ, ಮನಸ್ಸು ಶುದ್ಧಿ; ಪೂರ್ಣಿಮಾ ಅಕ್ಕ

19 siraguppa 01
Published on


ಸಿರಗುಪ್ಪ: ಸರ್ವ ಜನಾಂಗದವರು ಭೇದ-ಭಾವ ಮರೆತು ಬದುಕಿದಾಗ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯ ಎಂದು ಬಸವ ಮಠದ ಬಸವರಾಜಪ್ಪ ಶರಣರು ತಿಳಿಸಿದರು.

ನಗರದಲ್ಲಿ ಶಿವರಾತ್ರಿ ಅಂಗವಾಗಿ ಪ್ರಜಾಪಿತ ಈಶ್ವರಿ ವಿಶ್ವವಿದ್ಯಾಲಯದಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವಶಾಂತಿಗಾಗಿ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಜಾಪಿತ ಈಶ್ವರಿ ವಿಶ್ವವಿದ್ಯಾಲಯದ ಪೂರ್ಣಿಮಾ ಅಕ್ಕ ಮಾತನಾಡಿ, ಮಹಾಶಿವರಾತ್ರಿಯಲ್ಲಿ ಶಿವಪೂಜೆಗೆ ಪ್ರತಿಕ್ಷಣವೂ ಶುಭಗಳಿಗೆಯಾಗಿರುತ್ತದೆ. ಪೂಜಿಸಿ ಜ್ಞಾನ ಮಾಡುವುದರಿಂದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ದೊರೆಯುವ ನಂಬಿಕೆಯಿದೆ. ಶಿವನಾಮಸ್ಮರಣೆಯಿಂದ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ ಎಂದರು. ಶಾಸಕ ಎಂ.ಎಸ್.ಸೋಮಲಿಂಗಪ್ಪ, ವಿವಿಧ ಧರ್ಮಗಳ ಮುಖಂಡರಾದ ಬಸವಭೂಷಣ ಸ್ವಾಮೀಜಿ, ಡಾ.ಅಲಿ ಮುರ್ತುಜಾ ಖಾದ್ರಿ, ರೆವರೆಂಡ್ ಫಾದರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net