ತೋಂಟದಾರ್ಯ ಮಠದಲ್ಲಿ ಬಸವ ಪಂಚಮಿ

MDG
ಮುಂಡರಗಿಯ ಜಗದ್ಗುರು ತೋಂಟದಾರ್ಯ ಶಾಖಾ ಮಠದಲ್ಲಿ ಭಾನುವಾರ ಬಸವ ಪಂಚಮಿ ನಿಮಿತ್ತ ಮಕ್ಕಳಿಗೆ ಹಾಲು ಕುಡಿಸಲಾಯಿತು. ಎಚ್. ವಿರೂಪಾಕ್ಷಗೌಡ್ರ, ಕೊಟ್ರೇಶ ಅಂಗಡಿ, ಪವನ ಚೋಪ್ರಾ, ಇತರರಿದ್ದರು.
Published on

ಮುಂಡರಗಿ: ಜಗದ್ಗುರು ತೋಂಟದಾರ್ಯ ಮಠದಿಂದ ಪ್ರತಿ ವರ್ಷ ಬಸವ ಪಂಚಮಿ ಆಚರಿಸಲಾಗುತ್ತಿದ್ದು, ಮಕ್ಕಳಿಗೆ ಹಾಲು ಕುಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಎಪಿಎಂಸಿ ವರ್ತಕರ ಮಾಜಿ ಪ್ರತಿನಿಧಿ ಕೊಟ್ರೇಶ ಅಂಗಡಿ ಹೇಳಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಬಸವ ಪಂಚಮಿ ನಿಮಿತ್ತ ಭಾನುವಾರ ಮಕ್ಕಳು ಹಾಲು ಕುಡಿಸಿ ಅವರು ಮಾತನಾಡಿದರು. ಎ.ಕೆ. ಮುಲ್ಲಾನವರ, ಪವನ ಚೋಪ್ರಾ ಮಾತನಾಡಿದರು. ಕಡ್ಲಿಪೇಟೆ ಮೊದಲಾದ ಕಡೆಗೆ ತೆರಳಿ ಅಲ್ಲಿನ ಬಡ ಮಕ್ಕಳಿಗೆ ಹಾಲು ಕುಡಿಸಲಾಯಿತು.

ಎಚ್. ವಿರೂಪಾಕ್ಷಗೌಡ್ರ, ಪಾಲಾಕ್ಷಿ ಗಣದಿನ್ನಿ, ಈಶಣ್ಣ ಬೆಟಗೇರಿ, ದೇವು ಹಡಪದ, ಸದಾಶಿವಯ್ಯ ಕಬ್ಬೂರಮಠ, ಮುತ್ತಣ್ಣ ಹಾಳಕೇರಿ, ವಿಶ್ವನಾಥ ಉಳ್ಳಾಗಡ್ಡಿ, ಉಮೇಶ ಹಿರೇಮಠ, ಶಿವು ಬೆಟಗೇರಿ, ಸುರೇಶ ಬಣಕಾರ, ಸುಕನ್ಯಾ ಕಬ್ಬೂರಮಠ, ಶಿವಗಂಗಾ ನವಲಗುಂದ, ಪ್ರಭಾವತಿ ಕುಬಸದ, ಮಂಗಳಾ ಶೀರಿ, ಮಂಗಳಾ ಕರ್ಜಗಿ, ಗೀತಾ ಬೆಳದಡಗಿ, ಲತಾ ಹಿರೇಮಠ, ಶಾಂತಾ ಕುಬಸದ, ಶಾಂತಾ ಹಿರೇಮಠ, ಅನ್ನಪೂರ್ಣ, ವಿಜಯಾ ಹೂಗಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net