ಕೆ.ಆರ್.ಸಾಗರದಲ್ಲಿ ಬಸವ ಜಯಂತಿ

10-05--krs1
Published on

ಕೆ.ಆರ್.ಸಾಗರ : ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ಶುಕ್ರವಾರ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬಸವ ಜಯಂತಿ ಆಚರಣೆ ಮಾಡಲಾಯಿತು.
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಶ್ಮಿ ಈ ಸಂದರ್ಭ ಮಾತನಾಡಿ, ನೂರಾರು ವರ್ಷಗಳ ಹಿಂದೆಯೇ ಬಸವಣ್ಣ ಜಾತಿ ಪದ್ಧತಿ ನಿರ್ಮೂಲನೆ ಮಾಡಲು ಪಣ ತೊಟ್ಟಿದ್ದರು. ಅವರ ಸ್ಥಾಪಿಸಿದ ಅನುಭವ ಮಂಟಪ ಇಂದಿಗೂ ಹಲವು ದೇಶಗಳ ಸಂಸತ್ ವ್ಯವಸ್ಥೆಗೆ ಮಾದರಿಯಾಗಿದೆ ಎಂದರು.
ಕೆ.ಆರ್.ಸಾಗರ ಸರ್ಕಾರಿ ನೌಕರರ ಸಂಘದ ಘಟಕ ಅಧ್ಯಕ್ಷ ಶಿವಪ್ಪ, ಖಜಾಂಚಿ ನಾಗೇಶ್, ಸಹಾಯಕ ಇಂಜಿನಿಯರ್‌ಗಳಾದ ಅಭಿಲಾಷ್, ಜೈ ಪ್ರಕಾಶ್, ಶಿವಕುಮಾರ್, ಕೆಂಪರಾಜು ಇತರರು ಇದ್ದರು. ಕೆ.ಆರ್.ಸಾಗರ ಗ್ರಾಪಂ ಕಚೇರಿ, ಪೊಲೀಸ್ ಠಾಣೆ, ಕೆ.ಇ.ಆರ್.ಎಸ್. ಕಚೇರಿ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆ, ಸರ್ಕಾರಿ ಕಚೇರಿಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಬಸವೇಶ್ವರರ ಜಯಂತಿ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net