ಧರ್ಮ, ವಚನ ನಮ್ಮ ಪ್ರಾಣದಂತೆ: ಸಂಪನ್ಮೂಲ ವ್ಯಕ್ತಿ ಎಸ್.ಬಿ. ಲೀಲಾರಾಣಿ ಅಭಿಮತ

Basava Jothi)
Published on

ಮಂಡ್ಯ: ಸಂಸ್ಕೃತಿ, ಧರ್ಮ ಹಾಗೂ ವಚನಗಳು ನಮ್ಮ ಪ್ರಾಣವಿದ್ದಂತೆ. ಅದನ್ನು ಸಂರಕ್ಷಿಸುವ ಹೊಣೆ ನಮ್ಮದೆಂದು ಬಸವಣ್ಣ ಹೇಳಿದ್ದಾರೆ ಎಂದು ಸಂಪನ್ಮೂಲ ವ್ಯಕ್ತಿ ಎಸ್.ಬಿ. ಲೀಲಾರಾಣಿ ಹೇಳಿದರು.

ನಗರದ ಗಾಂಧಿಭವನದಲ್ಲಿ ಜಿಲ್ಲಾ ಜಗಜ್ಯೋತಿ ಬಸವೇಶ್ವರರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದಿಂದ ಆಯೋಜಿಸಿದ್ದ ಮನೆ-ಮನೆಗೆ ಸೌಹಾರ್ದ ಬಸವ ಜ್ಯೋತಿ 132ನೇ ಆಧ್ಯಾತ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನ ನುಡಿಗಳು ಶಿವಶರಣರು ಹಾಗೂ ಅನುಯಾಯಿಗಳಿಗೆ ಒಂದು ಗುರುತರವಾದ ಜವಾಬ್ದಾರಿ ಆಗಿದೆ ಎಂದರು.

ತಿ.ನರಸೀಪುರ ತಾಲೂಕು ಮುಡುಕನಪುರದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಎಸ್.ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ದ್ಯಾವಣ್ಣ, ನಿರ್ದೇಶಕರಾದ ಶಿವಕುಮಾರ್, ಮಹಾದೇವಸ್ವಾಮಿ, ಮಾರಸಿಂಗನಹಳ್ಳಿ ಶಿವಣ್ಣ, ಪುಟ್ಟಬಸಪ್ಪ, ಜಗದೀಶ್ ದೇವನೂರು, ಸಿ.ಎಸ್.ಎನ್ ಸ್ವಾಮಿ ಇತರರಿದ್ದರು. ಇದೇ ವೇಳೆ ಭಕ್ತರಿಗೆ ಅನ್ನದಾಸೋಹ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net