

ಮೈಸೂರು: ವಿಶ್ವಗುರು ಬಸವಣ್ಣ ಜಯಂತಿ ಪ್ರಯುಕ್ತ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಜ್ಜಿಗೆ ವಿತರಣೆ ಮಾಡಲಾಯಿತು.
ಬಳಗದ ಅಧ್ಯಕ್ಷ ಸಂದೀಪ್ ಮಾತನಾಡಿ, ಬಸವ ಜಯಂತಿಯು ಲಿಂಗಾಯತರ ಹಾಗೂ ಸರ್ವಧರ್ಮೀಯರ ಅತ್ಯಂತ ಪ್ರಮುಖ ಹಬ್ಬ. ರಾಜ್ಯಾದ್ಯಂತ ಬಸವ ಜಯಂತಿಯನ್ನು ಪ್ರತಿಯೊಬ್ಬರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. 12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣ ಎಂದರು.
ಬಸವಣ್ಣ ಅವರು ಸಮಾಜದಲ್ಲಿ ಜಾತಿ, ವರ್ಣ, ಲಿಂಗ ಭೇದ ಎಂಬುದು ಇಲ್ಲ, ನಾವೆಲ್ಲರು ಸಮಾನರು ಎಂದು ಸಮಾಜಕ್ಕೆ ಸಂದೇಶ ಸಾರಿದವರು. ಆದ್ದರಿಂದಲೇ ಬಸವೇಶ್ವರರನ್ನು ಬಸವಣ್ಣ, ಬಸವ, ವಿಶ್ವಗುರು ಎಂದು ಕರೆಯಲಾಗುತ್ತದೆ. ವಚನದ ಮೂಲಕ ಸಾಮಾಜಿಕ ಜಾಗೃತಿಯನ್ನು ಪಸರಿಸಲು ಆರಂಭಿಸಿದರು. ಬಿಜ್ಜಳನ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ, ಬಸವಣ್ಣ ಅನುಭವ ಮಂಟಪವನ್ನು ಪ್ರಾರಂಭಿಸಿದರು. ಇದು ನಂತರ ಎಲ್ಲ ವರ್ಗದ ಜನರಿಗೆ ಜೀವನದ ಆಧ್ಯಾತ್ಮಿಕ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಸಾಮಾನ್ಯ ಕೇಂದ್ರವಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಅಂಬಳೆ ಶಿವಣ್ಣ, ಕೆ.ಆರ್. ಬ್ಯಾಂಕ್ ಭಾಸ್ಕರ್, ಮಹೇಶ್ ಅರಸ್, ಶಿವಣ್ಣ, ಧರ್ಮೇಂದ್ರ, ಪ್ರಭು, ನಾಗಣ್ಣ, ಮಹದೇವಸ್ವಾಮಿ, ಚಂದ್ರಶೇಖರ್, ಪ್ರವೀಣ್, ತೀರ್ಥ, ಪಾಪಣ್ಣ , ಧನುಷ್, ರಾಕೇಶ್, ಭಾನು ಕುಮಾರ್, ಸುರೇಂದರ್, ರಮೇಶ್, ಸಂತೋಷ್ ಇದ್ದರು.