

ರಾಯಚೂರು ಜಿ¯್ಲÁಡಳಿತದಿಂದ ಏ.೩೦ರಂದು ನಡೆಯಲಿರುವ ಶ್ರೀ ಬಸವ ಜಯಂತ್ಯುತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಅಪರ ಜಿ¯್ಲÁಽಕಾರಿ ಶಿವಾನಂದ ಅವರು ಸಂಬAಽಸಿದ ಅಽಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಽಕಾರಿಗಳ ಕಚೇರಿಯಲ್ಲಿ ಗುರುವಾರ ಶ್ರೀ ಬಸವ ಜಯಂತಿ ನಿಮಿತ್ತ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಹಾಗೂ ವಿಜೃಂಭಣೆಯಿAದ ಜಯಂತಿಯನ್ನು ಆಚರಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಏ.೩೦ರ ಬೆಳಿಗ್ಗೆ ೯ ಗಂಟೆಗೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಅಂದು ಸಂಜೆ ಮೆರವಣಿಗೆ ನಡೆಯಲಿದ್ದು, ಈ ಜಯಂತಿ ಕಾರ್ಯಕ್ರಮಗಳಲ್ಲಿ ಅಽಕಾರಿಗಳು ಹಾಗೂ ಸಿಬ್ಬಂದಿ ತಪ್ಪದೇ ಹಾಜರಿರಬೇಕು. ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಮಹಾತ್ಮರ ಭಾವಚಿತ್ರಗಳಿಗೆ ಮಾಲಾರ್ಪಣೆ, ಪೂಜÁ ಕಾರ್ಯಕ್ರಮ ಸರಿಯಾಗಿ ನಡೆಯಬೇಕು. ಹೂದಾನಿಗಳಿಂದ ವೇದಿಕೆಯನ್ನು ಅಲಂಕಾರಗೊಳಿಸಬೇಕು. ವೀರಶೈವ ಕಲ್ಯಾಣ ಮಂಟಪದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆ ಕಾಪಾಡಲು ಮಹಾನಗರ ಪಾಲಿಕೆಯ ಅಽಕಾರಿಗಳು ಮತ್ತು ಸಿಬ್ಬಂದಿ ಅಗತ್ಯ ಕ್ರಮವಹಿಸಬೇಕು. ಶಿಷ್ಟಾಚಾರ ಪ್ರಕಾರ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಗಣ್ಯರಿಗೆ ತಲುಪಿಸಬೇಕೆಂದು ಸಂಬಅಽಸಿದ ಅಽಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಡಿಡಿಪಿಐ ಕೆ.ಬಿ.ಬಡಿಗೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗೂರು, ಮಹಾನಗರ ಪಾಲಿಕೆಯ ಸಮುದಾಯ ಸಂಘಟನಾ ಅಽಕಾರಿ ಕೃಷ್ಣ ಕಟ್ಟಿಮನಿ, ವಾರ್ತಾ ಇಲಾಖೆಯ ಗವಿಸಿದ್ದಪ್ಪ ಹೊಸಮನಿ, ಸಮಾಜದ ಮುಖಂಡರಾದ ಚಂದ್ರಶೇಖರ ಪಾಟೀಲ, ಪರಮೇಶ್ವರ ಸಾಲಿಮಠ, ರಾಚನಗೌಡ, ಹರವಿ ನಾಗನಗೌಡ, ಅಶೋಕ ಪಾಟೀಲ ಅತ್ತನೂರ, ಶಿವಾನಂದ, ವೀರನಗೌಡ ಬಂಡಿ, ಎಂ.ಚನ್ನಬಸವ, ಜೆ.ಬಸವರಾಜ, ಮಲ್ಲಿಕಾರ್ಜುನ ಗುಡಿಮನಿ, ಎಸï.ಜಿ.ಕಲ್ಲಯ್ಯಸ್ವಾಮಿ, ಆನಂದಕಮಾರ, ವಿಜಯಕುಮಾರ ಸಜ್ಜನ, ಪ್ರತಿಭಾ ಗೋನಾಳ, ಶಿವಯೋಗಿ ಪಾಟೀಲ ಸೇರಿ ಅನೇಕರು ಇದ್ದರು.