ತರೀಕೆರೆಯಲ್ಲಿ ಬಸವ ಜಯಂತಿ ಸರಳ ಆಚರಣೆ

10 TKE 1 (1)
ತರೀಕೆರೆಯ ಬಸವೇಶ್ವರ ಬೀದಿಯಲ್ಲಿ ಜಗಜ್ಯೋತಿ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಎಸಿ ಡಾ.ಕೆ.ಜೆ.ಕಾಂತರಾಜ್, ವಿ.ಎಸ್.ರಾಜೀವ್, ನವೀನ್ ಇತರರಿದ್ದರು.
Published on

ತರೀಕೆರೆ: ಜಗಜ್ಯೋತಿ ಬಸವಣ್ಣನವರ ಜಯಂತ್ಯೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಬಸವೇಶ್ವರ ಬೀದಿಯಲ್ಲಿ ಶ್ರೀ ಬೂದಿ ಬಸವೇಶ್ವರ ದೇಗುಲ ವಿಶ್ವಸ್ಥ ಸಮಿತಿಯಿಂದ ಸರಳವಾಗಿ ಬಸವಣ್ಣನವರ ರಥೋತ್ಸವ ನಡೆಸಲಾಯಿತು.
ಶ್ರೀ ಬೂದಿ ಬಸವೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಾತಃಕಾಲ ದೇವರಿಗೆ ವಿವಿಧ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶುಕ್ರವಾರ ಬೆಳಗ್ಗೆ 9 ಗಂಟೆ ಸಮಯದಲ್ಲಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ರಾಜಬೀದಿಗಳಲ್ಲಿ ಸ್ವಾಮಿ ರಥೋತ್ಸವ ನಡೆಸಿ ನೆರೆದಿದ್ದ ಭಕ್ತರಿಗೆ ತೀರ್ಥ,ಪ್ರಸಾದ ವಿನಿಯೋಗಿಸಲಾಯಿತು. ಎಸಿ ಡಾ.ಕೆ.ಜೆ.ಕಾಂತರಾಜ್, ತಹಸೀಲ್ದಾರ್ ವಿ.ಎಸ್.ರಾಜೀವ್, ಉಪ ತಹಸೀಲ್ದಾರ್ ನಾಗೇಂದ್ರನಾಯ್ಕ, ದೇಗುಲ ಸಮಿತಿ ಪ್ರಮುಖರಾದ ಲೋಕೇಶ್, ನವೀನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net