

ಕಪ್ಪಸೋಗೆ: ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿಯ ಕಗ್ಗಲೂರು ಗ್ರಾಮದಲ್ಲಿ ಭಾನುವಾರ ಅದ್ದೂರಿಯಾಗಿ ಬಸವ ಜಯಂತಿ ಆಚರಿಸಲಾಯಿತು.
ಆಕರ್ಷಕ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಬೆಳ್ಳಿರಥದಲ್ಲಿ ವಿವಿಧ ಹೂಗಳಿಂದ ಅಲಂಕೃತಗೊಂಡಿದ್ದ ಬಸವಣ್ಣ, ಶ್ರೀ ಶಿವಕುವಾರಸ್ವಾಮಿ, ಶ್ರೀ ಗುರುಮಲ್ಲೇಶ್ವರ ಭಾವಚಿತ್ರಕ್ಕೆ ಹಲ್ಲರೆ ಗುರು ಮಲ್ಲೇಶ್ವರ ಪಟ್ಟದ ಮಠಾಧ್ಯಕ್ಷ ಬಸವಣ್ಣ ಸ್ವಾಮೀಜಿ, ಕಸುವಿನಹಳ್ಳಿ ಮಠಾಧ್ಯಕ್ಷ ಶಿವಕುವಾರ ಸ್ವಾಮೀಜಿ, ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಬಸವ ರಥವು ಸಾಗುವ ರಸ್ತೆಯುದ್ದಕ್ಕೂ ಹಸಿರು- ತೋರಣ ಹಾಗೂ ದೀಪಾಲಂಕಾರ ಮಾಡಲಾಗಿತ್ತು. ಮೆರವಣಿಗೆಯಲ್ಲಿ ನಂದಿ ಕಂಬ, ವೀರಗಾಸೆ ಕುಣಿತ, ಛತ್ರಿ-ಚಾಮರಗಳು, ಜೋಡಿ ಬಸವ, ತಮಟೆ, ನಗಾ, ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದವು. ಗ್ರಾಮದ ಪ್ರಮುಖರಸ್ತೆಗಳಲ್ಲಿ ಸಾಗಿದ ಮೆರವಣಿಗೆ ಬಳಿಕ ಸ್ವಸ್ಥಾನಕ್ಕೆ ಮರಳಿತು.
ಬಸವ ಜಯಂತಿ ಪ್ರಯುಕ್ತ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮೈಸೂರು ಜಿಲ್ಲಾ ವೀರಶೈವ ಯುವ ಟಕದ ಅಧ್ಯಕ್ಷ ಅರ್ಜುನ್ ಪಾರ್ಥ, ವೀರಶೈವಮಹಾಸಭಾ ತಾಲೂಕು ನಿರ್ದೇಶಕರಾದ ದುಗ್ಗಹಳ್ಳಿಶಿವನಾಗಪ್ಪ, ಮಹೇಶ್, ತಾಲೂಕು ಯುವ ಟಕದ ಅಧ್ಯಕ್ಷ ಮಹದೇವಸ್ವಾಮಿ, ದೇಬೂರ್ ಅಶೋಕ್, ಶಿವಪ್ಪ ದೇವರು, ಕಗ್ಗಲೂರು ಗುರುಮೂರ್ತಿ, ನವೀನ್, ವಾದನಹಳ್ಳಿ ಮೂರ್ತಿ, ಕಡಬೂರ್ ಸೋಮೇಶ್, ಬಸಾಪುರ ಮಹದೇವಸ್ವಾಮಿ ಇದ್ದರು.