ಬೆಟ್ಟದಪುರದಲ್ಲಿ ಬಸವ ಜಯಂತಿ ಆಚರಣೆ

ಬೆಟ್ಟದಪುರದಲ್ಲಿ ಬಸವ ಜಯಂತಿಯನ್ನು ಆಚರಣೆ ಮಾಡಲಾಯಿತು.
ಬೆಟ್ಟದಪುರದಲ್ಲಿ ಬಸವ ಜಯಂತಿಯನ್ನು ಆಚರಣೆ ಮಾಡಲಾಯಿತು.
Published on

ಬೆಟ್ಟದಪುರ: ವೀರಶೈವ ಲಿಂಗಾಯತ ಸಮಿತಿ ವತಿಯಿಂದ ಬುಧವಾರ ಗ್ರಾಮದಲ್ಲಿ ಬಸವ ಜಯಂತಿಯನ್ನು ಸಂಭ್ರಮದೊಂದಿಗೆ ಆಚರಣೆ ಮಾಡಲಾಯಿತು.

ಗ್ರಾಮದ ಹೃದಯಭಾಗದಲ್ಲಿರುವ ಶ್ರೀ ಪವಾಡ ಬಸವೇಶ್ವರ ದೇವಾಲಯದಲ್ಲಿ ಮೊದಲು ಪೂಜೆ ಸಲ್ಲಿಸಿ ನಂತರ ದೇಗುಲ ಆವರಣದಲ್ಲಿ ಬಸವೇಶ್ವರ ಹಾಗೂ ಸಿದ್ಧಗಂಗಾ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಟ್ರ್ಯಾಕ್ಟರ್ ಮೇಲೆ ವಿಶೇಷವಾಗಿ ಹೂವುಗಳಿಂದ ಅಲಂಕಾರ ಮಾಡಿದ ಮಂಟಪದ ಮೇಲೆ ಪ್ರತಿಷ್ಠಾಪಿಸಿ, ಗ್ರಾಮದ ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರು ಪೂಜೆ ಸಲ್ಲಿಸಿದರು. ಬಳಿಕ ಎಲ್ಲರಿಗೂ ಪಾನಕ ಹಾಗೂ ಪ್ರಸಾದ ವಿತರಿಸಲಾಯಿತು.

ಸಮಿತಿಯ ಗೌರವಾಧ್ಯಕ್ಷ ಬಿ.ಜಿ.ಜಗದೀಶ್, ಅಧ್ಯಕ್ಷ ಶಿವದೇವ್, ಖಜಾಂಚಿ ರಾಜೇಂದ್ರ, ಕಾರ್ಯದರ್ಶಿ ಬಿ.ಎಸ್.ಮಹದೇವಪ್ಪ, ಶಿವು, ನಾಗರಾಜ ಶೆಟ್ಟಿ, ಬಿ.ಎಸ್.ನಟರಾಜ್ ಸೇರಿದಂತೆ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net