ಬೃಹತ್ ಅಂಗೈಲಿಂಗ ತಯಾರಿಸಿ ಬಸವ ಜಯಂತಿ ಆಚರಣೆ

SHARANAPADE
ವಿಜಯಪುರ ನಗರದ ಎಸ್.ಎಸ್. ಹೈಸ್ಕೂಲ್ ಹತ್ತಿರ ಶರಣಪಡೆ ಲಿಂಗಾಯತ ಜಾಗರಣ ವೇದಿಕೆಯಯಿಂದ ಬೃಹತ್ ಪ್ರಮಾಣದ ಅಂಗೈಲಿಂಗ ತಯಾರಿಸಿ ಬಸವ ಜಯಂತಿ ಆಚರಿಸಲಾಯಿತು. ಮಿಲಿಂದ ಚಂಚಲಕರ, ಪ್ರಭುಗೌಡ ಪಾಟೀಲ, ಅನೀಲ ಹೊಸಮನಿ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ಎಸ್.ಎಸ್. ಹೈಸ್ಕೂಲ್ ಹತ್ತಿರ ಶರಣಪಡೆ ಲಿಂಗಾಯತ ಜಾಗರಣ ವೇದಿಕೆಯಯಿಂದ ಬೃಹತ್ ಪ್ರಮಾಣದ ಅಂಗೈಲಿಂಗ ತಯಾರಿಸಿ ಬಸವ ಜಯಂತಿಯನ್ನು ವಿನೂತನವಾಗಿ ಆಚರಿಸಲಾಯಿತು.

ಮಿಲಿಂದ ಚಂಚಲಕರ ಉಪಸ್ಥಿತಿಯಲ್ಲಿ ಪ್ರಸಾದ ವಿತರಣೆ ಮಾಡಲಾಯಿತು. ವೇದಿಕೆಯ ಅಧ್ಯಕ್ಷ ಕೆ.ಆರ್. ಕಡೇಚೂರ ಮಾತನಾಡಿ, ಈಶ್ವರ ಆತ್ಮ, ಗುಡಿಯಲಿಲ್ಲ. ಪಾಶಾನಕಲ್ಲುಗಳಿಗೆ ಚೇತನ ಇಲ್ಲ, ದೇಹ ದೇಗುಲದಲ್ಲಿಯೇ ಚೇತನ ಇದೆ. 12ನೇ ಶತಮಾನದಲ್ಲಿ ಬಸವಣ್ಣನವರು ದೇವರನ್ನು ಗುಡಿಯಿಂದ ದೇಹದ ದೇಗುಲಕ್ಕೆ ತಂದರು. ದೇಹ ದೇಗುಲದಲ್ಲಿ ದೇವರಿದ್ದಾನೆ. ಚೇತನ ಪೂಜೆ ಮಾಡಬೇಕಾದರೆ ಅಂಗೈಯಲ್ಲಿ ಪ್ರತಿಯೊಬ್ಬರು ಲಿಂಗ ಪೂಜೆ ಮಾಡಿಕೊಳ್ಳಬೇಕು ಎಂದರು.

ಪ್ರಭುಗೌಡ ಪಾಟೀಲ, ಅನೀಲ ಹೊಸಮನಿ, ಚನ್ನು ಕಟ್ಟಿಮನಿ, ಬಸವರಾಜ ಕೊಂಡಗೂಳಿ, ನಿಂಗಪ್ಪ ಸಂಗಾಪೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net