ಸಂಸತ್ ಭವನದಲ್ಲಿ ಬಸವ ಜಯಂತಿ ಆಚರಣೆ, ಶಾಂತಲಿಂಗ ಸ್ವಾಮೀಜಿ, ಶ್ಲಾಘನೆ

NRGL SHANTALING SWAMIJI
Published on

ನರೇಗಲ್ಲ: ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿ ಸಮಸಮಾಜದ ಕನಸು ಕಂಡ ಸಮಾನತೆಯ ಹರಿಕಾರರ ವಿಶ್ವಗುರು ಬಸವಣ್ಣನವರು ಈ ದೇಶ ಕಂಡ ಶ್ರೇಷ್ಠ ಸಾಂಸ್ಕೃತಿಕ ನಾಯಕ. ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಸಂಸತ್ತಿನ ಪರಿಕಲ್ಪನೆ ಕೊಟ್ಟು ಸರ್ವರಿಗೆ ನ್ಯಾಯ ಒದಗಿಸಿದ ಸಮಾಜಪರ ಚಿಂತಕ ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿಯನ್ನು ದೇಶದ ಆಡಳಿತ ಸೌಧ ನೂತನ ಸಂಸತ್ ಭವನದಲ್ಲಿ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಚನ ಸಾಹಿತ್ಯದ ಮೂಲಕ ಜನರಲ್ಲಿರುವ ಮೌಢ್ಯಾಚರಣೆ, ಸ್ತ್ರೀ ಸ್ವಾತಂತ್ರ್ಯ ಸಮಸಮಾಜ ಹೀಗೆ ಹಲವಾರು ಕ್ರಾಂತಿಕಾರಿ ವಿಚಾರಗಳ ಮೂಲಕ ಸಮಾಜೋಧಾರ್ವಿುಕ ಚಳವಳಿಗೆ ನಾಂದಿ ಹಾಡಿದ ಪುಣ್ಯಪುರುಷ ಅಣ್ಣ ಬಸವಣ್ಣ. ಅವರು ಅನುಭವ ಮಂಟಪ ಸ್ಥಾಪಿಸಿ ಅಲ್ಲಮಪ್ರಭುಗಳನ್ನು ಅದರ ಅಧ್ಯಕ್ಷರನ್ನಾಗಿಸಿ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ್ದಾರೆ. ವಿಶ್ವಗುರು ಬಸವಣ್ಣನವರ ಚಿಂತನೆಗಳು ಸರ್ವಕಾಲಿಕವಾಗಿವೆ. ಅಂತಹ ಐತಿಹಾಸಿಕ ಪುರುಷರ ಜಯಂತಿಯನ್ನು ಈ ದೇಶದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸಂಸತ್ ಭವನದಲ್ಲಿ ಆಚರಿಸಲು ಸಹಕರಿಸಿದ ಸಂಸದ ವಿ. ಸೋಮಣ್ಣ ಹಾಗೂ ಅನುಮೋದಿಸಿದ ಸಭಾಧ್ಯಕ್ಷ ಓಂಬಿರ್ಲಾ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯದ ಎಲ್ಲ ಸಂಸದರು, ರಾಜ್ಯಸಭಾ ಸದಸ್ಯರ ಕಾರ್ಯವನ್ನು ಸ್ವಾಮೀಜಿ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net