ಬಾದಾಮಿಯಲ್ಲಿಂದು ಬಸವ ಜಯಂತಿ ಆಚರಣೆ

Basava Jayanti celebrated in Badami today
ಬಾದಾಮಿಯ ವೀರಪುಲಕೇಶಿ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಮಾತನಾಡಿದರು. ಎ.ಸಿ. ಪಟ್ಟಣದ, ರಾಚಣ್ಣ ಪಟ್ಟಣದ, ಡಾ. ಅವಿನಾಶ ಮಮದಾಪೂರ, ಎಂ.ಡಿ. ಯಲಿಗಾರ, ಆರ್.ಬಿ. ಸಂಕದಾಳ, ಬಿ.ಎ್. ಹೊರಕೇರಿ, ಎಸ್.ಡಿ. ರೋಣದ ಮತ್ತಿತರರಿದ್ದಾರೆ.
Published on

ಬಾದಾಮಿ: ಪಟ್ಟಣದಲ್ಲಿ ಬಸವೇಶ್ವರರ ಜಯಂತಿಯನ್ನು ಏ.30ರಂದು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಹೇಳಿದರು.

ವೀರಪುಲಕೇಶಿ ವಿದ್ಯಾ ಸಂಸ್ಥೆಯ ಆಡಳಿತ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಂಪ್ರದಾಯ, ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಗಳಿಂದ ನೆಮ್ಮದಿ ಜೀವನ ಸಾಧ್ಯ ಎಂಬುದನ್ನು ತಮ್ಮ ವಚನಗಳ ಮೂಲಕ ಜಗತ್ತಿಗೆ ತಿಳಿಸಿದ ಬಸವಣ್ಣವರ ಜಯಂತಿ ನಮಗೆಲ್ಲ ಹಬ್ಬವಿದ್ದಂತೆ. ಆದ್ದರಿಂದ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದರು.

ಸಂಸ್ಥೆಯ ಚೇರ್ಮನ್ ಎ.ಸಿ. ಪಟ್ಟಣದ ಮಾತನಾಡಿ, ಬಸವ ಅಭಿಮಾನಿಗಳು ಈ ಬಾರಿ ಕುಮಾರೇಶ್ವರ ಸಭಾಭವನದಿಂದ ಬೆಳಗ್ಗೆ 8 ಗಂಟೆಗೆ ಬಸವ ಮೂರ್ತಿಯನ್ನು ಸಾರೋಟದಲ್ಲಿ ಇರಿಸಿ ವಿವಿಧ ವಾದ್ಯಗಳ ಮೂಲಕ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಂತರ ನಗರವನದಲ್ಲಿ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. ಚಂದ್ರಶೇಖರ ಹೆಗಡೆ ಬಸವೇಶ್ವರರ ಕುರಿತು ಉಪನ್ಯಾಸ ನೀಡಲಿದ್ದಾರೆ. ಏಕದಂತ ಸೇವಾ ಸಮಿತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷ ರಾಚಣ್ಣ ಪಟ್ಟಣದ ಮಾತನಾಡಿದರು. ಡಾ. ಅವಿನಾಶ ಮಮದಾಪೂರ, ಎಂ.ಡಿ. ಯಲಿಗಾರ, ಆರ್.ಬಿ. ಸಂಕದಾಳ, ಬಿ.ಎ್. ಹೊರಕೇರಿ, ಎಸ್.ಡಿ. ರೋಣದ, ಗುಂಡಪ್ಪ ತೀರ್ಥಪ್ಪನವರ, ನಗರ ಪ್ರಾಧಿಕಾರ ಅಧ್ಯಕ್ಷ ಶಿವುಕುಮಾರ ಹಿರೇಮಠ, ಸುರೇಶ ಹೆಬ್ಬಳ್ಳಿ, ಎಂ.ಎಸ್. ರುದ್ರಗೌಡ್ರ, ಸಿ.ಯು. ಪಟ್ಟಣದ, ಎಂ.ಎಸ್. ಹಿರೇಹಾಳ, ಎಸ್.ಎಸ್. ಮಿಟ್ಟಲಕೋಡ, ಚನ್ನಪ್ಪ ಅಥಣಿ, ಸೋಮು ವಡ್ಡರ, ಸಿದ್ದು ಭಜಂತ್ರಿ, ಎನ್.ಎಸ್.ಕಾಚೆಟ್ಟಿ, ಜಿ.ಎಂ.ಹಿರೇಮಠ, ಮುತ್ತಣ್ಣ ಚಿನಿವಾಲರ, ಗಣೇಶ ಕುಬಸದ, ಸುರೇಶ ಹಡಪದ, ಗೋವಿಂದಪ್ಪ ಮಡಿವಾಳರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net