ವೀರಶೈವ ಸಜ್ಜನ ಸಂಘದಿಂದ ಬಸವ ಜಯಂತಿ

Basava Jayanti by Veerashaiva Sajjan Sangha
Published on

ಮೈಸೂರು: ನಗರದ ಕಬೀರ್ ರಸ್ತೆಯ ಕಂಠಿ ಮಲ್ಲಣ್ಣ ಕಲ್ಯಾಣ ಮಂದಿರದಲ್ಲಿ ಭಾನುವಾರ ಮೈಸೂರು ವೀರಶೈವ ಸಜ್ಜನ ಸಂಘ ವತಿಯಿಂದ ಬಸವ ಜಯಂತಿ ಆಚರಿಸಲಾಯಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಚಿಕ್ಕಮಗಳೂರು ಉಪನಿರ್ದೇಶಕಿ ಡಾ.ಮಂಜುಳಾ ಹುಲ್ಲಹಳ್ಳಿ ಮಾತನಾಡಿ, ಬಸವಣ್ಣ ಅವರು ಅನುಭವ ಮಂಟಪ ಸ್ಥಾಪಿಸಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮುಕ್ತ ಅವಕಾಶ ನೀಡಿದರು. ಮಹಿಳೆಯರಿಗೆ ಸಮಾನತೆಯನ್ನು ನೀಡಿದರು ಎಂದರು.

ಬಸವಣ್ಣ ಅವರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಎಲ್ಲರನ್ನು ಅವರು ಒಂದೇ ದೃಷ್ಟಿಯಲ್ಲಿ ಕಂಡರು. ನಡೆ, ನುಡಿಯಲ್ಲಿ ಮಾದರಿಯಾಗಿದ್ದ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಕರೆ ನೀಡಿದರು.

ಸಂಘದ ಹಿರಿಯ ಸದಸ್ಯರಾದ ಸಿ. ನಾಗರಾಜ್, ಜಿ.ವಿರೂಪಾಕ್ಷ, ಎ.ಬಿ. ವಿಜಯಶಂಕರ್, ಎಂ.ಸಿ.ಶಿವಶಂಕರ್, ದಾಕ್ಷಾಯಣಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ಪ್ರದೀಪ್ ಕುಮಾರ್, ಸಂಘದ ಅಧ್ಯಕ್ಷ ಎಂ. ಟಿ. ಮಲ್ಲಿಕಾರ್ಜುನ್, ಉಪಾಧ್ಯಕ್ಷ ಪಿ.ಎನ್. ದಿನೇಶ್ ಕುಮಾರ್, ಗೌರವ ಕಾರ್ಯದರ್ಶಿ ಕೆ.ವಿ.ಪ್ರದೀಪ್ ಕುಮಾರ್, ಸಹ ಕಾರ್ಯದರ್ಶಿ ಎಂ. ಮನೋಹರ್, ಖಜಾಂಚಿ ಪಿ.ಎಂ. ಸುನೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net