

ಕುಂದಗೋಳ: ಜಗಜ್ಯೋತಿ ಬಸವೇಶ್ವರ ಜಯಂತಿ ಮೆರವಣಿಗೆಯಲ್ಲಿ ಯುವಕರು ಬಸವೇಶ್ವರ ಮೂರ್ತಿಯೊಂದಿಗೆ ಹನುಮಂತ, ಛತ್ರಪತಿ ಶಿವಾಜಿ ಮಹಾರಾಜ, ಡಾ ಬಿ.ಆರ್. ಅಂಬೇಡ್ಕರ ಮೂರ್ತಿಗಳ ಮೆರವಣಿಗೆ ಮಾಡುತ್ತಿರುವುದು ಬಸವೇಶ್ವರರ ಸಮಾನತೆ ತತ್ವದ ಸಂಕೇತವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಹೇಳಿದರು.
ಪಟ್ಟಣದ ಮಾರ್ಕೆಟ್ ರಸ್ತೆಯ ಬಸವೇಶ್ವರ ಉತ್ಸವ ಸಮಿತಿಯವರು ಜಯಂತಿ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಗರಾಜ ದೇಶಪಾಂಡೆ, ರಾಜಣ್ಣ ಮೊರಬದ, ಶೇಖಣ್ಣ ಬಾಳಿಕಾಯಿ, ಗಣೇಶ ಕೊಕಾಟೆ, ಪ್ರವೀಣ ಗಂಗಾಯಿ , ಚೇತನ ಬಾಳಿಕಾಯಿ, ಗಿರೀಶ ನೆಲಗುಡ್ಡ, ಕಿರಣ ಶಿವಳ್ಳಿ, ಸಚಿನ ಬಾಳಿಕಾಯಿ, ಸಾಗರ ಬಾಳಿಕಾಯಿ, ಸಲೀಂ ಕಡ್ಲಿ, ಗುರು ಚಲವಾದಿ, ಸುಧೀರ ಬಾಳಿಕಾಯಿ, ಬಸವರಾಜ ಕುಡುವಕ್ಕಲ, ಸಂತೋಷ ಪಾಳೆದ ಸಮಿತಿಯು ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.