ವೀರಶೈವ ಲಿಂಗಾಯತರ ಒಗ್ಗಟ್ಟು ನಿರಂತರ

M Y PATIL
Published on

ಕಲಬುರಗಿ: ವೀರಶೈವ, ಲಿಂಗಾಯತರು ವಿವಿಧ ಒಳಪಂಗಡ, ಗೊಂದಲಗಳ ಮಧ್ಯೆ ವಿಭಜನೆ ಹೊಂದಿದ್ದು, ಚದುರಿ ಹೋಗಿರುವ ಬಸವ ಅನುಯಾಯಿಗಳನ್ನು ಒಗ್ಗೂಡಿಸಿ, ಯಶಸ್ವಿಯಾಗಿ ಬಸವ ಜಯಂತಿ ಆಚರಿಸಿದ್ದು, ಈ ಒಗ್ಗಟ್ಟು ಮುಂದುವರಿಸಲಾಗುವುದು ಎಂದು ಬಸವ ಜಯಂತಿ ಉತ್ಸವ ಸಮಿತಿ ಜಿಲ್ಲಾಧ್ಯಕ್ಷ, ಶಾಸಕ ಎಂ.ವೈ.ಪಾಟೀಲ್​ ಹೇಳಿದರು. ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮಬಾರಿಗೆ ಎಲ್ಲ ಬಸವಪರ ಸಂಟನೆಗಳನ್ನು ಒಗ್ಗೂಡಿಸಿ, ಒಂದೇ ವೇದಿಕೆಯಲ್ಲಿ ಕರೆತಂದು ಅದ್ದೂರಿ ಮತ್ತು ರ‍್ಥಪರ‍್ಣವಾಗಿ ಬಸವ ಜಯಂತಿ ಆಚರಿಸಲಾಗಿದೆ. ಮೊದಲ ಬಾರಿಗೆ ಜಿಲ್ಲೆಯ ಪ್ರತಿ ಹಳ್ಳಿಗೂ ಜಿಲ್ಲಾಮಟ್ಟದ ಉತ್ಸವ ತಲುಪಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ೧೦೦ಕ್ಕೆ ೧೦೦ ಯಶಸ್ವಿ ಆಗಿದ್ದೇವೆ ಎಂದು ಹೇಳುವುದಿಲ್ಲ. ಆದರೆ ಹರಿದು ಹಂಚಿ ಹೋಗಿರುವ ಸಮಾಜವನ್ನು ಒಂದೇ ವೇದಿಕೆಯಲ್ಲಿ ತಂದಿರುವ ಸಮಾಧಾನ ಇದೆ. ಇದೇ ಮಾದರಿ ಬಸವ ರ‍್ಮ ಅಳವಡಿಸಿಕೊಂಡು ಎಲ್ಲರೂ ಸಾಗಿದರೆ ಸಮಾಜ ಬಲಿಷ್ಠವಾಗಿ ಹೊರಹೊಮ್ಮಲಿದೆ ಎಂದರು. ಸಮಾಜದ ಎಲ್ಲ ಹಿರಿಯರು, ಯುವಕರು, ಸಂಟನೆಗಳವರ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ. ನಾನು ಅಧ್ಯಕ್ಷನಾಗಿ ಸಂರ‍್ಕ ಸೇತುವೆ ಆಗಿದ್ದೆ, ಎಲ್ಲರೂ ಶ್ರಮಿಸಿದ್ದರಿಂದ ಐತಿಹಾಸಿಕ ಕರ‍್ಯಕ್ರಮ ಮಾಡಲಾಗಿದೆ. ಎಲ್ಲ ಕಾಯಕ ಶರಣರ ಸಮುದಾಯ ಒಗ್ಗೂಡಿಸಲಾಗಿದೆ. ಯುವಕರಿಂದ ಸಚಿವರವರೆಗೆ ಎಲ್ಲರೂ ಸಹಕರಿಸಿದ್ದಾರೆ. ಯಾರಿಗೂ ಭಾರವಾಗದಂತೆ ಸಮಾಜದ ಸಶಕ್ತರಿಂದ ಸಹಾಯ ಪಡೆದು, ಉತ್ಸವ ಮಾಡಲಾಗಿದೆ. ಇದೇ ಮಾದರಿ ಬಸವ ರ‍್ಮ ಕಟ್ಟುವ ಕೆಲಸ ಮಾಡಿದ್ದೇವೆ ಎಂದರು. ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ್​ ಮಾತನಾಡಿ, ಗಣತಿಯಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಕಡಿಮೆ ತೋರಿಸಿದ್ದು, ಒಂದು ವಿಧಾನಸಭೆ ಕ್ಷೇತ್ರಕ್ಕೆ ಐದು ಸಾವಿರ ಜನ ಎಂದೇ ಪರಿಗಣಿಸಿದರೂ, ೨೨೪ ಕ್ಷೇತ್ರ ಪರಿಗಣಿಸಿದರೂ ಕನಿಷ್ಠ ಒಂದು ಕೋಟಿ ಜನಸಂಖ್ಯೆ ಆಗುತ್ತದೆ. ಈ ಬಗ್ಗೆ ಹೋರಾಟ ಮಾಡಲಾಗುವುದು ಎಂದರು. ಶಾಸಕ ಅಲ್ಲಮಪ್ರಭು ಪಾಟೀಲ್​, ಮಾಜಿ ಎಂಎಲ್​ಸಿ ಅಮರನಾಥ ಪಾಟೀಲ್​, ಸಂತೋಷ ಪಾಟೀಲ್​ ಸರಡಗಿ, ಪ್ರಭುಲಿಂಗ ಮಹಾಗಾಂವಕರ್​, ಆರ್​.ಜಿ.ಶೆಟಗಾರ್​, ರವೀಂದ್ರ ಶಾಬಾದಿ, ಸೋಮಶೇಖರ ಹಿರೇಮಠ ಇತರರಿದ್ದರು.

ಕಲಬುರಗಿ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸುವಲ್ಲಿ ಬಸವ ಜಯಂತಿ ವೇದಿಕೆಯಾಗಿದೆ. ಇನ್ನಷ್ಟು ಬಲಿಷ್ಠ ಮಾಡಲು ಸಮಾಜದ ಹಿರಿಯರು, ಶಾಸಕರು, ಸಚಿವರನ್ನು ಒಳಗೊಂಡ ಪಂಚ ಕಮಿಟಿ ರಚಿಸಿ, ಜಿಲ್ಲೆಯಲ್ಲಿ ಸಮಾಜಕ್ಕೆ ಧಕ್ಕೆ ಬಂದಾಗ ಧ್ವನಿ ಎತ್ತಲಾಗುವುದು. ಜಯಂತಿ ನಿಮಿತ್ತ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ, ಸಂಟನೆಗೆ ಬಲ ತುಂಬಲಾಗಿದೆ. ಪಕ್ಷ ಮೀರಿ ಸಮಾಜದ ಹಿತಕ್ಕೆ ಶ್ರಮಿಸಲಾಗಿದೆ. ಭವಿಷ್ಯದ ಸಂಟನೆಗೆ ಉತ್ಸವ ಬುನಾದಿಯಾಗಿದೆ. ಜಾತಿ ಜನಗಣತಿ ಸೇರಿ ಸಮಾಜದ ಹಿತಕ್ಕೆ ವಿರುದ್ಧ ಎಲ್ಲ ವಿಷಯಗಳ ಬಗ್ಗೆ ಧ್ವನಿ ಎತ್ತಲಾಗುವುದು. | ಶರಣು ಮೋದಿ, ಅಧ್ಯಕ್ಷ ವೀರಶೈವ ಲಿಂಗಾಯತ ಮಹಾಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net