ಸಮ ಸಮಾಜದ ಕನಸು ಕಂಡ ಬಸವಣ್ಣ

IMG-20240514-WA0157
ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಪುಟ್ಟಶೆಟ್ಟಿ, ಡಾ.ನಂಜುಂಡಸ್ವಾಮಿ, ಡಾ.ಕೆ.ಪಿ.ಪ್ರಸನ್ನ, ರಾಜಶೇಖರ ಇತರರು ಇತರರು.
Published on

ಹುಣಸೂರು: ಜಗತ್ತಿನ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಪ್ರಾಧ್ಯಾಪಕ ಡಾ.ನಂಜುಂಡಸ್ವಾಮಿ ಬಣ್ಣಿಸಿದರು.

ಸರ್ಕಾರಿ ಮಹಿಳಾ ಕಾಲೇಜಿನ ಸಾಂಸ್ಕೃತಿಕ ವೇದಿಕೆ ವತಿಯಿಂದ ಬುಧವಾರ ಆಯೋಜಿಸಿದ್ಬ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ವರಿಗೂ ಅರಿವು ಉಂಟು ಮಾಡುವ ಮೂಲಕ ಸಮ ಸಮಾಜದ ಕನಸು ಕಂಡವರು ಬಸವಣ್ಣ. ಮನುಷ್ಯರಿಗಾಗಿ ನಡೆದ ಮಾನವೀಯತೆಯ ದೊಡ್ಡ ಹೋರಾಟವೆಂದರೆ ಅದು ಶರಣರ ಹೋರಾಟ. ಇಡೀ ಭಾರತದ ತುಂಬಾ ದೇವರು, ಧರ್ಮ, ರಾಜರ ಬಗ್ಗೆ ಮಾತನಾಡುತ್ತಿದ್ದ ಕಾಲದಲ್ಲಿ ಬಹುಜನರ ಬಗ್ಗೆ, ಶೋಷಿತರ ಬಗ್ಗೆ, ಸ್ತ್ರೀಯರ ಬಗ್ಗೆ ಮಾತನಾಡಿದ ಮಹಾ ಮಾನವತಾವಾದಿ ಬಸವಣ್ಣ ಎಂದು ತಿಳಿಸಿದರು.

ಸಮಾಜಕ್ಕೆ ಹೆಣ್ಣು ಧೈರ್ಯವಂತೆ, ಗುಣವಂತೆ, ಅಕ್ಷರವಂತೆ ಎಂದು ತೋರಿಸಿಕೊಟ್ಟವರು ಬಸವಣ್ಣ. ಮನೆಯೊಳಗೆ ಇದ್ದಂತಹ ಸ್ತ್ರೀಯರನ್ನು ಅನುಭವ ಮಂಟಪಕ್ಕೆ ಪ್ರವೇಶ ನೀಡುವ ಮೂಲಕ ಸ್ವಾತಂತ್ರೃ ಕೊಟ್ಟರು. ಹೆಣ್ಣಿಗೆ ಮೊದಲು ಅಕ್ಷರದ ಅರಿವನ್ನುಂಟು ಮಾಡಿದ ಗುರು ಬಸವಣ್ಣ. ತಳ ಸಮುದಾಯದವರಿಗೆ ದೇವಾಲಯಕ್ಕೆ ಪ್ರವೇಶವನ್ನು ನಿರಾಕರಿಸಿದಾಗ ಬಸವಣ್ಣಅಂತಹ ಜನರಿಗೆ ಲಿಂಗಧಾರಣೆ ಮಾಡುವ ಮೂಲಕ ಸಮ ಸಮಾಜಕ್ಕೆ ಯತ್ನಿಸಿದರು. ಶೋಷಿತವರ್ಗವೇ ದೇವರೆಂದು ಭಾವಿಸಿದ ದೇವತಾ ಮನುಷ್ಯ ಬಸವಣ್ಣ. ಬುದ್ಧ, ಬಸವಣ್ಣ, ಅಂಬೇಡ್ಕರ್ ಇವರಿಲ್ಲದ ಭಾರತವನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಾಂಶುಪಾಲ ಪುಟ್ಟಶೆಟ್ಟಿ, ಪ್ರಾಧ್ಯಾಪಕರಾದ ಡಾ.ಟಿ.ಕೆ.ಬೋಪಯ್ಯ, ರಾಜಶೇಖರ, ಡಾ.ಜಿ.ಆರ್, ಮಂಜುನಾಥ, ಡಾ.ಪ್ರಸನ್ನ, ಕೆ.ಪಿ.ಹನುಮಂತಪ್ಪ, ಕುಮಾರ್, ಲಕ್ಷ್ಮಯ್ಯ, ಡಾ.ಶೋಭಾ, ಅ.ಕಲಾಶ್ರೀ, ರಜಿಯಾ ಸುಲ್ತಾನ ಇತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net