ಬಸವ ಸಂಸ್ಕೃತಿ ಅಭಿಯಾನ ಸೆ.5ಕ್ಕೆ ಆಗಮನ

15-msk-2
ಮಸ್ಕಿಯಲ್ಲಿ ಮಹಾಮನೆ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ದುರಗಣ್ಣ ಅವರನ್ನು ಸನ್ಮಾನಿಸಲಾಯಿತು. ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಪ್ರಮುಖರಾದ ಪಿ.ರುದ್ರಪ್ಪ, ಡಾ.ಸರ್ವಮಂಗಳ ಸಕ್ರಿ, ಡಾ.ಶಿವಶರಣಪ್ಪ ಇತ್ಲಿ ಇತರರಿದ್ದರು.
Published on

ಮಸ್ಕಿ: ರಾಜ್ಯ ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲರೂ ಕೈ ಜೋಡಿಸಬೇಕು ಎಂದು ಸಂತೆಕೆಲ್ಲೂರಿನ ಶ್ರೀ ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸೆ.1ರಂದು ಬಸವನಬಾಗೇವಾಡಿಯಲ್ಲಿ ಆರಂಭವಾಗುವ ಬಸವ ಸಂಸ್ಕೃತಿ ಅಭಿಯಾನ ರಾಯಚೂರು ನಗರಕ್ಕೆ ಸೆ.5ರಂದು ಆಗಮಿಸಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚು ಜನ ಭಾಗವಹಿಸಬೇಕು ಎಂದು ಕೋರಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಪಿ.ರುದ್ರಪ್ಪ ಮಾತನಾಡಿ, ಲಿಂಗಾಯತ ಮಠಗಳ ಒಕ್ಕೂಟದಿಂದ ಅಭಿಯಾನ ಆರಂಭಗೊಂಡಿದ್ದು, ಶರಣರ ಹೆಸರಿನಲ್ಲಿರುವ ಎಲ್ಲ ಸಂಘಟನೆಗಳು, ಬಸವ ನಿಷ್ಠರು ಭಾಗವಹಿಸಬೇಕು. ಶರಣರ ಆಶಯಗಳನ್ನು ಸಾರ್ವತ್ರಿಕವಾಗಿ ತಿಳಿ ಹೇಳುವ ಮಹಾಕಾರ್ಯ ಇದಾಗಿದ್ದು, ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕೋರಿದರು. ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಡಾ.ಸರ್ವಮಂಗಳ ಸಕ್ರಿ ಮಾತನಾಡಿದರು. ಡಾ.ಶಿವಶರಣಪ್ಪ ಇತ್ಲಿ ಇದ್ದರು.

ಮಸ್ಕಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರನ್ನಾಗಿ ಮುದ್ದನಗೌಡ ಬಸವಪುರ, ಸದಸ್ಯರನ್ನಾಗಿ ಡಾ.ಬಿ.ಎಚ್.ದಿವಟರ್, ಡಾ.ಶಿವರಣಪ್ಪ, ಶಶಿಧರ ಮಸ್ಕಿ, ಸೂಗಪ್ಪ ಮರಳದ, ಬಸಪ್ಪ ಬ್ಯಾಳಿ, ವಿವೇಕಾನಂದ ಎಲಿಗಾರ, ಬಸವರಾಜ ಮಿಟ್ಟಿಮನಿ, ಮಲ್ಲಿಕಾರ್ಜುನ ಕಂದಗಲ್, ಮಹೇಶ, ಮಾಹಾಂತೇಶ ಮಸ್ಕಿ ಆಯ್ಕೆಯಾದರು. ಇದೇ ವೇಳೆ ಪಟ್ಟಣದಲ್ಲಿ ಕಳೆದ 15 ವರ್ಷಗಳಿಂದ ನಡೆಯುತ್ತಿರುವ ಮಹಾಮನೆ ಸಮಿತಿಗೆ ಅಧ್ಯಕ್ಷರನ್ನಾಗಿ ಶಿಕ್ಷಕ ದುರಗಣ್ಣ ಅವರನ್ನು ಮರು ಆಯ್ಕೆ ಮಾಡಲಾಯಿತು. ಕೋಶಾಧ್ಯಕ್ಷರಾಗಿ ಮಲ್ಲಿಕಾರ್ಜುನ ಕಂದಗಲ್ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net