

ಮಂಡ್ಯ: ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಬಸವ ತತ್ವದ ಧರ್ಮಾಚರಣೆ ಪೂರಕವಾಗಿದೆ ಎಂದು ಎಂದು ಭಾಲ್ಕಿ ಮಠದ ಡಾ.ಬಸವಲಿಂಗಪಟ್ಟದ ದೇವರು ಸ್ವಾಮೀಜಿ ತಿಳಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಜಾತಿಗಳು ಜಾಲಿ ಮರವಿದ್ದಂತೆ. ಧರ್ಮ ಎಂಬುದು ಮಾವಿನ ಮರವಿದ್ದಂತೆ ಎನ್ನುವ ಮೂಲಕ ಪ್ರಸ್ತುತ ಸಾಮಾಜಿಕ ವೈಪರೀತ್ಯಗಳ ಕುರಿತು ವಿಶ್ಲೇಷಿಸಿದರು.
ಧರ್ಮ ಎಂದೂ ಸಂಕುಚಿತವಾಗಿರುವುದಿಲ್ಲ. ಇತ್ತೀಚೆಗೆ ಸಮಾಜದಲ್ಲಿ ಧರ್ಮವನ್ನು ಅಪಾರ್ಥ ಮಾಡಿಕೊಂಡು, ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿ ಅದನ್ನು ರಾಡಿಯಾಗಿಸಲಾಗಿದೆ. ಧರ್ಮವೆಂದರೆ ಕೆಳಗೆ ಬಿದ್ದವರನ್ನು ಮೇಲೆತ್ತುವುದು, ಸಂಕಷ್ಟದಲ್ಲಿರುವವರಿಗೆ ನೆರವಾಗುವುದು, ಹಸಿದವರಿಗೆ ಅನ್ನ ನೀಡುವುದು, ಇಂತಹ ಆಚಾರಗಳೇ ಧರ್ಮದ ಮೂಲ ಆಶಯಗಳಾಗಿವೆ. ಆದರೆ ಇತ್ತೀಚೆಗೆ ಜಾತಿಗಳನ್ನು ಮುನ್ನೆಲೆಗ್ಠೆಟಿಜಛಿಜಿಜಿಟಿಛಿಜ ತಂದು ಅದನ್ನು ರೋಗವಾಗಿ ಮಾರ್ಪಡಿಸಿಕೊಂಡಿದ್ದೇವೆ. ಈ ರೋಗಕ್ಕೆ ಔಷಧವೇ ಧರ್ಮವಾಗಿದೆ ಎಂದು ಹೇಳಿದರು.
ಬೇಬಿ ಬೆಟ್ಟದ ಶ್ರೀರಾಮ ಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಮಾತನಾಡಿ, 11ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಕ್ರಾಂತಿಯನ್ನೇ ಮಾಡಿದರು. ಒಂದು ಕಾಲಘಟ್ಟದಲ್ಲಿ ಅನುಭವ ಮಂಟಪ ಎಂಬುದಿರಲೇ ಇಲ್ಲ ಎಂಬ ಆರೋಪಗಳು ಎದುರಾದವು. ಆಗ ವಕೀಲರಾಗಿದ್ದ .ಗು.ಹಳಕಟ್ಟಿ ಅವರು ಅತ್ಯಂತ ಬಡತನದಲ್ಲಿದ್ದರೂ ಕೂಡ ವಚನ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಮೂಲಕ ಅನುಭವ ಮಂಟಪದ ಲವನ್ನು ಜನಮಾನಸಕ್ಕೆ ತಲುಪಿಸಿದ್ದರು. ಹಳಕಟ್ಟಿಯವರು ಈ ಪ್ರಯತ್ನ ಮಾಡದಿದ್ದರೆ ಇಂದಿನ ತಲೆಮಾರು ಅನುಭವ ಮಂಟಪವನ್ನು ನಂಬುತ್ತಲೇ ಇರಲಿಲ್ಲ. ಆದ್ದರಿಂದ ಬಸವಾದಿ ಶರಣರ ಆದರ್ಶ ತತ್ವಗಳನ್ನು ಜನಮಾನಸದಲ್ಲಿ ಬಿತ್ತಬೇಕಾಗಿದೆ. ಆಸ್ತಿಕತೆಯನ್ನು ಮರೆತು ನಾಸ್ತಿಕತೆ ಹೆಚ್ಚಾಗಿದೆ. ಕಂದಾಚಾರ ಎಂಬುದು ಸಮಾಜದಲ್ಲಿ ವಿಜೃಂಭಿಸುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಬಸವ ತತ್ವವನ್ನು ಬಿತ್ತಿದರೆ ಮುಂದೆ ಅದು ಬೆಳಕಾಗಿ ಪರಿವರ್ತನೆಯಾಗಲಿದೆ. ಸ್ವಾಸ್ಥ್ಯ ಸಮಾಜಕ್ಕೆ ಅದುವೇ ಮಾರ್ಗದರ್ಶನ ನೀಡಲಿದೆ ಎಂಬ ನಿಟ್ಟಿನಲ್ಲಿ ಬಸವ ಸಂಸ್ಕೃತಿ ಅಭಿಯಾನ ಸಾಗುತ್ತಿದೆ ಎಂದು ಹೇಳಿದರು.
ಮಹಾಂತ ಸ್ವಾಮೀಜಿ ಶೀಗುಣಸಿ ಮಾತನಾಡಿದರು. ಮಾತೆ ಪ್ರಭುತಾಯಿ ಅವರು ಸ್ವರ್ಗ-ನರಕಗಳ ಕುರಿತು ಉಪನ್ಯಾಸ ನೀಡಿದರು. ಅಲ್ಲಮ ಪ್ರಭುದೇವಸ್ವಾಮಿ, ಮಹಾಂತ ಸ್ವಾಮೀಜಿ, ಹುಣಸೂರಿನ ಶಿವಾನಂದ ಸ್ವಾಮೀಜಿ, ಅವ್ವೇರಹಳ್ಳಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಧ್ಯಕ್ಷ ಎಂ.ಎಸ್.ಮಂಜುನಾಥ್, ವೀರಶೈವ ವಿದ್ಯಾರ್ಥಿನಿಲಯದ ಟ್ರಸ್ಟಿ ಮಲ್ಲಿಕಾರ್ಜುನಯ್ಯ, ಶಿವರುದ್ರಪ್ಪ ಇತರರಿದ್ದರು. ಬಳಿಕ ಜಂಗಮದೆಡೆಗೆ ನಾಟಕ ಯಶಸ್ವಿಯಾಗಿ ಜರುಗಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ಸಾಮರಸ್ಯ ನಡಿಗೆ ರಥಯಾತ್ರೆ ಹೊರಟು ಜೆ.ಸಿ.ವೃತ್ತ, ಮಹಾವೀರ ವೃತ್ತದ ಮೂಲಕ ಸಾಗಿ ಕಲಾಮಂದಿರದಲ್ಲಿ ಸಮಾವೇಶಗೊಂಡಿತು.