ಸೆ.5 ರಂದು ನಗರದಲ್ಲಿ ಬಸವ ಸಂಸ್ಕೃತಿ ಆಭಿಯಾನ

J.BASAVARAJA
J.BASAVARAJA
Published on

ರಾಯಚೂರು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸೆ.1 ರಿಂದ ಅಕ್ಟೋಬರ್ 1ವರೆಗೆ ರಾಜ್ಯಾಧ್ಯಂತ ಬಸವ ಸಂಸ್ಕೃತಿ ಆಭಿಯಾನ ಆಯೋಜಿಸಲಾಗಿದ್ದು, ಸೆ.5 ರಂದು ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆಂದು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಜೆ.ಬಸವರಾಜ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 10 ಗಂಟೆಗೆ ಅಭಿಯಾನಕ್ಕೆ ಸ್ವಾಗತ ನಡೆಯಲಿದ್ದು, ಷಟಸ್ಥಳ ಧ್ವಜಾರೋಹಣ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಮುಕ್ತ ಸಂವಾದ, ಸಂಜೆ 4 ಗಂಟೆಗೆ ಸಾಮರಸ್ಯದ ನಡಿಗೆಯು ನಗರದ ಬಸವ ವೃತ್ತದಿಂದ ಗಂಜ ಕಲ್ಯಾಣ ಮಂಟಪದವರಗೆ ನಡೆಯಲಿದೆ. ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಸಾನಿಧ್ಯವನ್ನು ಲಿಂಗಾಯತ ಪೀಠಾಧಿಪತಿಗಳ ಒಕ್ಕೂಟ ಅಧ್ಯಕ್ಷರಾದ ಬಾಲ್ಕಿಯ ಡಾ.ಬಸವಲಿಂಗ ಸಾಣೇಹಳ್ಳಿಯ ಶಿವಾಚಾರ್ಯ ಪಟ್ಟದೇವರು, ಡಾ.ಪಂಡಿತಾರಾಧ್ಯ ಮಹಾಸ್ವಾಮಿಗಳು, ಗದಗನ ಡಾ.ತೋಟದ ಸಿದ್ದರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ. ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಡಾ.ಎಸ್.ಶಿವರಾಜ ಪಾಟೀಲ್ ವಹಿಸಲಿದ್ದಾರೆ.

ಶರಣರ ರಾಜಕೀಯ ಪರಿಕಲ್ಪನೆ ವಿಷಯ ಕುರಿತು ಡಾ.ಬಸವರಾಜ ಸಾದರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶರಣ ತತ್ವದ ವೈಶಿಷ್ಟತೆ ಶ್ರೀ ಗುರುಬಸವ ಮಹಾಸ್ವಾಮೀಜಿ ಉಪನ್ಯಾಸ ನೀಡಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ನಾಗೇಶಪ್ಪ, ಶರಣಬಸವ ಜಾಡಲದಿನ್ನಿ, ದೇವೆಂದ್ರಮ್ಮ, ಅಮರೇಶ ನಿಲೋಗಲ್, ಬಸವರಾಜ ಕುರುಗೋಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net