

ಧಾರವಾಡ: ರಾಯಚೂರಿನಹೆಣ್ಣು ಜಗದ ಕಣ್ಣು' ಸಾಹಿತ್ಯ ವೇದಿಕೆ ಪ್ರತಿವರ್ಷ ನೀಡುವ `ಬಸವ ಭೂಷಣ' ಪ್ರಶಸ್ತಿಗೆ ನಗರದ ಹಿರಿಯ ವೈದ್ಯ ಡಾ. ನಿತಿನ್‌ಚಂದ್ರ ಹತ್ತಿಕಾಳ ಭಾಜನರಾಗಿದ್ದಾರೆ. ವೈದ್ಯಕೀಯ, ಶಿಕ್ಷಣ, ಕಲೆ, ಕೃಷಿ ಮುಂತಾದ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ವೇದಿಕೆ, ಕಾಮಣಿ ತಜ್ಞ ಡಾ. ನಿತಿನ್‌ಚಂದ್ರ ಹತ್ತಿಕಾಳ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸಿದ್ದವೀರ ಸತ್ಸಂಗ ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷರಾಗಿರುವ ಹತ್ತಿಕಾಳ, 1991ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ವಿವಿಧ ಸಂಘ ಸಂಸ್ಥೆಗಳ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಕೊಪ್ಪಳದಲ್ಲಿ ಜು. 30ರಂದು ನಡೆಯುವ ವೇದಿಕೆಯ 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ವೇದಿಕೆಯ ಸಂಸ್ಥಾಪಕ ರಮೇಶ ನಾಯಕ ತಿಳಿಸಿದ್ದಾರೆ.