ಲೇಖಕ ಸುರೇಶ ಗುದಗನವರಗೆ ಬಸವ' ಪ್ರಶಸ್ತಿ

1 Dwd 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ನಿವೃತ್ತ ಉಪನ್ಯಾಸಕ, ಲೇಖಕ ಸುರೇಶ ಗುದಗನವರ ಅವರಿಗೆ ಹುಬ್ಬಳ್ಳಿಯ ಅಖಿಲ ಕರ್ನಾಟಕ ಬಸವ ಬಳಗದಿಂದ 2024ನೇ ಸಾಲಿನಬಸವ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹುಬ್ಬಳ್ಳಿಯ ಜಯಚಾಮರಾಜ ನಗರದ ಅಕ್ಕನ ಬಳಗದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಬಳಗದಿಂದ ಪ್ರದಾನ ಮಾಡಲಾಯಿತು. ಡಾ. ರಮೇಶ ಮಹಾದೇವಪ್ಪನವರ, ಡಾ. ಎಂ.ಆರ್. ಪಾಟೀಲ, ಇತರರಿದ್ದರು.
ರಾಮದುರ್ಗ ತಾಲೂಕು ಚುಂಚನೂರ ಗ್ರಾಮದ ಸುರೇಶ ಅವರು ಸದ್ಯ ಧಾರವಾಡದಲ್ಲಿ ನೆಲೆಸಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಹಲವಾರು ಕೃತಿಗಳನ್ನು ರಚಿಸಿರುವ ಅವರು ಕನಕ ಶ್ರೀ, ಬಸವ ಜ್ಯೋತಿ, ಸಮÁಜ ಸೇವಾರತ್ನ ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net