ಜ್ಯೋತಿ ಟೋಸುರಗೆ ಬಸವ ಪುರಸ್ಕಾರ ಪ್ರದಾನ

17 hly 1 A- SANMANA
Published on

ಹಳಿಯಾಳ: ದಶಕಗಳಿಂದ ಮಾಡುತ್ತಿರುವ ಸಮಾಜ ಸೇವೆ ಪರಿಗಣಿಸಿ ಹಳಿಯಾಳದ ಸಾಫ್ಟ್​ವೇರ್ ಉದ್ಯಮಿ ದಂಪತಿಯಾದ ನಾರಾಯಣ ಟೋಸುರ ಹಾಗೂ ಜ್ಯೋತಿ ಟೋಸುರ ಅವರಿಗೆ ಬೆಂಗಳೂರಿನ ಬಸವ ಪರಿಷತ್ ಕರ್ನಾಟಕ ವತಿಯಿಂದ 2024ರ ಬಸವ ಪುರಸ್ಕಾರ ಹಾಗೂ ನಾರಿ ಸನ್ಮಾನ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಜೂನ್ 15ರಂದು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಾರಾಯಣ ಹಾಗೂ ಜ್ಯೋತಿ ದಂಪತಿಗೆ ಪುರಸ್ಕಾರ ಪ್ರದಾನ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ರೇಣುಕಾಚಾರ್ಯ, ಇತರರಿದ್ದರು.


ಸಾಧನೆ: ಹಳಿಯಾಳ ಹಾಗೂ ಬೆಂಗಳೂರಿನಲ್ಲಿ ಪ್ರಾಕ್ಸಿನ್ ಟೆಕ್ ಪ್ರೖೆವೆಟ್ ಲಿ. ಸಂಸ್ಥೆಯನ್ನು ನಡೆಸುತ್ತಿರುವ ದಂಪತಿ ಹಳಿಯಾಳದಲ್ಲಿ ಸರ್ಕಾರದ ಜೀವನೋಪಾಯ ಇಲಾಖೆಗಳ ಸಹಾಯದಿಂದ ಉದ್ಯೋಗ ಮೇಳಗಳನ್ನು ನಡೆಸುವ ಮೂಲಕ ಯುವಕರನ್ನು ಗುರುತಿಸಿ ಅವರಿಗೆ 3 ತಿಂಗಳ ಕಾಲ ಊಟ ಮತ್ತು ವಸತಿಯೊಂದಿಗೆ ತರಬೇತಿ ನೀಡಿ, ಅವರ ಶಿಕ್ಷಣದ ಆಧಾರದ ಮೇಲೆ ತರಬೇತಿ ನಂತರ ಅವರಿಗೆ ಶೇ. 100ರಷ್ಟು ಉದ್ಯೋಗ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 1300ಕ್ಕೂ ಯುವಕರಿಗೆ ತರಬೇತಿ ಮತ್ತು ಉದ್ಯೋಗ ನೀಡಿದ್ದನ್ನು ಗುರುತಿಸಿ ಬಸವ ಪುರಸ್ಕಾರ ನೀಡಿ ಪುರಸ್ಕರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net