ಮಿತ್ರಮಂಡಳಿ ಶಕ್ತಿ ಪ್ರದರ್ಶನ: ಕಾರ್​ ರ‍್ಯಾಲಿಯಲ್ಲಿ ಬಸವ ಗರ್ಜನೆ

car (6)
Published on

ಕಲಬುರಗಿ: ಕೇಸರಿಯ ಷಟಸ್ಥಲ ಧ್ವಜಗಳನ್ನು ಹೊತ್ತ ನೂರಾರು ವಾಹನಗಳ ಗರ್ಜನೆ, ಯುವ ಬಸವಾಭಿಮಾನಿಗಳ ಬಸವಘೋಷಣೆ, ಜೈಕಾರ, ವಚನ, ಬಸವ ನಾಮದ ಝೇಂಕಾರ... ನಗರದಲ್ಲಿ ಬಸವ ಮಿತ್ರ ಮಂಡಳಿಯಿಂದ ಬಸವ ಜಯಂತಿ ನಿಮಿತ್ತ ಹಮ್ಮಿಕೊಂಡ ೧೧ನೇ ವರ್ಷದ ಬೃಹತ್​ ಕಾರ್​ ರ‍್ಯಾಲಿಯಲ್ಲಿ ಕಂಡು ಬಂದ ಅಮೋ ದೃಶ್ಯ ಇದು.

ಬಸವ ಮಿತ್ರ ಮಂಡಳಿಯಿಂದ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಜಗತ್​ ವೃತ್ತದವರೆಗೆ ಬೃಹತ್​ ಕಾರ್​ ರ‍್ಯಾಲಿ ನಡೆಯಿತು. ದೇವಸ್ಥಾನದ ಬಳಿ ಶ್ರೀ ಶರಣಬಸವೇಶ್ವರ ದಾಸೋಹ ಸಂಸ್ಥಾನದ ೯ನೇ ಪೀಠಾಧಿಪತಿ ಶ್ರೀ ಚಿ.ದೊಡ್ಡಪ್ಪ ಅಪ್ಪ ಬಸವ ಭಾವಚಿತ್ರವನ್ನು ಅನಾವರಣಗೊಳಿಸುವ ಮೂಲಕ ರ‍್ಯಾಲಿಗೆ ಚಾಲನೆ ನೀಡಿದರು.

ವಿಶೇಷವಾಗಿ ಯುವಕರ ನೇತೃತ್ವದಲ್ಲಿ ಸತತ ೧೧ನೇ ವರ್ಷ ನಡೆಯುತ್ತಿರುವ ಕಾರ್ರ‍್ಯಾಲಿಯಲ್ಲಿ ಯುವ ಬಸವಾಭಿಮಾನಿಗಳ ಬೃಹತ್​ ಪಡೆಯೇ ಸೇರಿತ್ತು. ದೇವಸ್ಥಾನದಿಂದ ಆರಂಭವಾದ ರ‍್ಯಾಲಿಯೂ ಗೋವಾ ಹೊಟೇಲ್​ ವೃತ್ತ, ಎನ್​ವಿ ಕಾಲೇಜ್​, ಆನಂದ ಹೊಟೇಲ್​ ವೃತ್ತ, ರ‍್ದಾರ್​ ವಲ್ಲಭಬಾಯಿ ಪಟೇಲ್​ ವೃತ್ತ, ಜಿಲ್ಲಾಧಿಕಾರಿ ಕಚೇರಿ ಮರ‍್ಗವಾಗಿ ಜಗತ್​ ವೃತ್ತವನ್ನು ತಲುಪಿತು.

೫೦೦ಕ್ಕಿಂತ ಹೆಚ್ಚು ಕಾರ್​ ಭಾಗಿ: ಬಸವ ಮಿತ್ರಮಂಡಳಿಯಿಂದ ಆಯೋಜಿಸಿದ ಕಾರ್​ ರ‍್ಯಾಲಿಯಲ್ಲಿ ನಗರ ಸೇರಿ ಜಿಲ್ಲೆಯ ತಾಲೂಕು, ಹಳ್ಳಿಗಳಿಂದಲೂ ಆಗಮಿಸಿದ ೫೦೦ಕ್ಕಿಂತ ಹೆಚ್ಚು ವಾಹನಗಳು ಭಾಗವಹಿಸಿದ್ದವು. ಶರಣಬಸವೇಶ್ವರ ದೇವಸ್ಥಾನದ ಇಡೀ ಆವರಣ, ಜಾತ್ರಾ ಮೈದಾನದಲ್ಲಿ ಕಾರ್​ಗಳು ನಿಲ್ಲಿಸಲಾಗಿತ್ತು. ಏಕಕಾಲಕ್ಕೆ ಸರತಿಯಲ್ಲಿ ವಾಹನಗಳು ರ‍್ಯಾಲಿಯಲ್ಲಿ ಪಾಲ್ಗೊಂಡವು. ಬಸವೇಶ್ವರರ, ಶರಣಬಸವೇಶ್ವರರ ಜೈಕಾರ ಮೊಳಗಿದವು.

ಡಿಜೆ ಮೂಲಕ ಬಸವಣ್ಣ, ಶರಣಬಸವೇಶ್ವರರ ಹಾಡುಗಳೊಂದಿಗೆ ಆಗಮಿಸಿದ ರ‍್ಯಾಲಿಯೂ ಜಗತ್​ ವೃತ್ತದಲ್ಲಿ ಸಮಾರೋಪಗೊಂಡಿತು. ಶ್ರೀ ಬಸವೇಶ್ವರರ ಮರ‍್ತಿಗೆ ಪುಷ್ಪ ನಮನ ಸಲ್ಲಿಸಿ, ಮಂಗಲಗೊಳಿಸಲಾಯಿತು.

ಚಾಲನೆ ಸಮಾರಂಭದಲ್ಲಿ ಶಾಸಕರಾದ ಬಸನಗೌಡ ಪಾಟೀಲ್​ ಯತ್ನಾಳ, ಅಲ್ಲಮಪ್ರಭು ಪಾಟೀಲ್​, ಜಗದೇವ ಗುತ್ತೇದಾರ್​, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್​, ಮಾಜಿ ಎಂಎಲ್​ಸಿ ಅಮರನಾಥ ಪಾಟೀಲ್​, ಡಾ.ಅಲ್ಲಮಪ್ರಭು ದೇಶಮುಖ ಸೇರಿದಂತೆ ಬಸವ ಮಿತ್ರ ಮಂಡಳಿಯ ಪ್ರಮುಖರು, ಯುವಕರು ಪಾಲ್ಗೊಂಡಿದ್ದರು.

೧೧ನೇ ವರ್ಷದ ಸಂಭ್ರಮ: ಸಾಮೂಹಿಕ ನಾಯಕತ್ವದಲ್ಲಿ ಯಶಸ್ವಿಯಾಗಿ ಬಸವ ಜಯಂತಿ ಆಚರಿಸಿಕೊಂಡು ಬರುತ್ತಿರುವ ಬಸವ ಮಿತ್ರಮಂಡಳಿ ಪ್ರಸಕ್ತ ೧೧ನೇ  ವರ್ಷಕ್ಕೆ ಪದಾರ್ಪಣೆ ಮಾಡಿದೆ. ಯಾರದ್ದೆ ನಾಯಕತ್ವವಿಲ್ಲದೇ ಎಲ್ಲ ಬಸವಣ್ಣನವರ ಯುವ ಅಭಿಮಾನಿಗಳೇ ಕೂಡಿಕೊಂಡು ಯಶಸ್ವಿಯಾಗಿ ಸ್ವತ: ನಿರ್ವಹಣೆ ಮಾಡಿಕೊಂಡು ಬರುತ್ತಿದ್ದು, ಪ್ರತಿ ವರ್ಷ ಕಾರ್​ ರ್ಯಾಲಿ, ಬಸವೇಶ್ವರರ ಬೃಹತ್​ ಬ್ಯಾನರ್​ ಅಳವಡಿಕೆ, ಬಸವ ಜಯಂತಿ ದಿನದಂದು ಬಸವೇಶ್ವರರ ಬೃಹತ್​ ಮೂರ್ತಿಯ ಅದ್ದೂರಿ ಮೆರವಣಿಗೆ ಆಯೋಜಿಸಿ, ಗಮನ ಸೆಳೆಯುತ್ತಿದೆ.

ಎಲ್ಲ ವರ್ಗ, ಜಾತಿ ಭಾಗಿ:  ಬಸವ ಮಿತ್ರ ಮಂಡಳಿಯ ಕಾರ್​ನಲ್ಲಿ ಬಸವಾದಿ ಶರಣರ ಆಶಯದಂತೆ ಎಲ್ಲ ರ‍್ಗ, ಜಾತಿಗಳ ಯುವಕರು, ಬಸವಾಭಿಮಾನಿಗಳು ಭಾಗವಹಿಸಿದ್ದರು. ಪುಟ್ಟ ಕಾರ್​ನಿಂದ ಹಿಡಿದು ಕೋಟ್ಯಂತರ ರೂ. ಮೌಲ್ಯದ ಐಶಾರಾಮಿ ಕಾರ್​ಗಳು, ಜೀಪ್​ಗಳು ಭಾಗವಹಿಸಿದ್ದವು. ಪ್ರತಿ ಕಾರಿಗೂ ಷಟಸ್ಥಲ ಧ್ವಜವನ್ನು ಅಳವಡಿಸಿದ್ದು, ಇಡೀ ಮಾರ್ಗವೂ  ಕೇಸರಿಮಯವಾಗಿತ್ತು.

ಶರಣು ಶರಣರಾರ್ಥಿ: ಕಲಬುರಗಿ ನಗರದ ಇತಿಹಾಸದಲ್ಲೇ ಐತಿಹಾಸಿಕ ಬಸವ ಮಿತ್ರ ಮಂಡಳಿಯ ಕಾರ್​ ರ‍್ಯಾಲಿಯ ಯಶಸ್ಸಿಗೆ ಸಹಕರಿಸಿದ ಎಲ್ಲ ಬಸವಾಭಿಮಾನಿಗಳಿಗೆ ಬಸವ ಮಿತ್ರ ಮಂಡಳಿಯೂ ಶರಣಾರ್ಥಿ ತಿಳಿಸಿದೆ. ಅದೇ ಮಾದರಿ ಏ.೩೦ರಂದು ಮಧ್ಯಾಹ್ನ ೧ರಿಂದ ೪ಗಂಟೆವರೆಗೆ ಅನ್ನದಾನ, ನಂತರ ಅದ್ದೂರಿ ಹಾಗೂ ಐತಿಹಾಸಿಕ ಮೆರವಣಿಗೆ ಸರ್ದಾರ್ ​ ವಲ್ಲಭಬಾಯಿ ಪಟೇಲ್​ ವೃತ್ತದಿಂದ ಜಗತ್​ ವೃತ್ತದವರೆಗೆ ನಡೆಯಲಿದ್ದು, ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net