ಬಸವ ಜಯಂತಿಗೆ ಸ್ತ್ರೀ ಶಕ್ತಿ ಅನಾವರಣ

0905Klb03
Published on

ಕಲಬುರಗಿ: ಬಸವ ಜಯಂತಿ ನಿಮಿತ್ತ ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಮಹಿಳೆಯರ ಬೃಹತ್ ಬೈಕ್ ರ‍್ಯಾಲಿಯಲ್ಲಿ ಇಲಕಲ್ ಸೀರೆ ತೊಟ್ಟ ಮಹಿಳೆಯರು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದರೆ, ಬಸವ ಜಯಂತಿ ಮಹಿಳಾ ಘಟಕದಿಂದ ಬಸವ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಸಾಂಸ್ಕೃತಿಕ ವೈಭವ ಅನಾವರಣವಾಯಿತು.
ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಬಳಿ ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಬೈಕ್ ರ‍್ಯಾಲಿಗೆ ಬಸವ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು. ೬೦ಕ್ಕೂ ಹೆಚ್ಚು ಬೈಕ್‌ಗಳಲ್ಲಿ ಯುವತಿಯರು, ವಯಸ್ಕರಾದಿಯಾಗಿ ಎಲ್ಲ ವಯಸ್ಸಿನ ಮಹಿಳೆಯರು ಇಲಕಲ್ ಸೀರೆ, ಮೂಗುತ್ತಿ, ವಿಭೂತಿ ಧರಿಸಿ ರ‍್ಯಾಲಿ ನಡೆಸಿದರು.
ಶರಣಬಸವೇಶ್ವರ ದೇವಸ್ಥಾನದ ಬಳಿ ಆರಂಭವಾದ ಬೈಕ್ ರ‍್ಯಾಲಿ ಲಾಲ್‌ಗೇರಿ ಕ್ರಾಸ್, ಪ್ರಕಾಶ ಟಾಕೀಸ್, ಸೂಪರ್ ಮಾರ್ಕೆಟ್ ಪೊಲೀಸ್ ಚೌಕ್ ಮಾರ್ಗವಾಗಿ ಜಗತ್‌ನ ಬಸವೇಶ್ವರ ವೃತ್ತ ತಲುಪಿತು. ರ‍್ಯಾಲಿಯಲ್ಲಿ ಮಹಿಳೆಯರು ಬಸವೇಶ್ವರರಿಗೆ ಜೈಕಾರ ಹಾಕಿ, ಗಮನ ಸೆಳೆದರು.
ಜಯಂತಿ ಸಮಿತಿಯ ಉಪಾಧ್ಯಕ್ಷೆ ಮಾಲಾಶ್ರೀ ಕಣ್ಣಿ, ಡಾ.ಕಲ್ಪನಾ ಭೀಮಳ್ಳಿ, ಡಾ.ನೀಲಾಂಬಿಕಾ ಶೇರಿಕಾರ್, ವಾಣಿಶ್ರೀ ಸಗರಕರ್, ಭಾಗೀರಥಿ ಗುನ್ನಾಪುರ, ವಿಜಯಲಕ್ಷಿ ಹಿರೇಮಠ, ಜಯಶ್ರೀ ಜೈನ್, ಪೂರ್ಣಿಮಾ, ವೈಶಾಲಿ, ನಾಗೇಶ್ವರಿ ಕದಮ, ಮಹಾದೇವಿ ಕೆಸರಟಗಿ, ಶ್ರೇಯಾಂಕಾ ಕಣ್ಣಿ ಸೇರಿ ನೂರಾರು ಮಹಿಳೆಯರು ರ‍್ಯಾಲಿಯಲ್ಲಿದ್ದರು. ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ವಿನೋದ ಪಾಟೀಲ್ ಸರಡಗಿ, ವಿಶ್ವನಾಥ ಪಾಟೀಲ್ ಸರಡಗಿ, ದಯಾನಂದ ಪಾಟೀಲ್, ಶ್ರೀಧರ ನಾಗನಹಳ್ಳಿ, ಯಶ್ವಂತರಾವ ಅಷ್ಟಗಿ, ಗುರುರಾಜ ಅಂಬಾಡಿ, ಕಲ್ಯಾಣರಾವ ಪಾಟೀಲ್, ಮಹೇಶ ಪಾಟೀಲ್, ಅಭಿಷೇಕ ನಾಗನಹಳ್ಳಿ, ಕಿರಣ ಕಣ್ಣಿ, ಮಲ್ಲಿಕಾರ್ಜುನ ದಣ್ಣೂರ ಇತರರಿದ್ದರು.

ಬಸವ ಸಾಂಸ್ಕೃತಿಕ ಮೆರವಣಿಗೆ: ಬಸವ ಜಯಂತಿ ಮಹಿಳಾ ಘಟಕದಿಂದ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಗತ್‌ನ ಬಸವೇಶ್ವರ ಮೂರ್ತಿವರೆಗೆ ನಡೆದ ಬಸವ ಸಾಂಸ್ಕೃತಿಕ ಮೆರವಣಿಗೆಗೆ ಡಾ.ಭಾಗ್ಯಶ್ರೀ ಪಾಟೀಲ್ ಮೆರವಣಿಗೆಗೆ ಚಾಲನೆ ನೀಡಿದರು. ಬಸವೇಶ್ವರರ ಭಾವಚಿತ್ರದೊಂದಿಗೆ ಡೊಳ್ಳು, ವಾದ್ಯ ಮೇಳಗಳು, ಮಹಿಳಾ ಭಜನಾ ತಂಡಗಳೊAದಿಗೆ ಸಾಂಸ್ಕೃತಿಕ ವೈಭವದ ಮೆರವಣಿಗೆ ನಡೆಯಿತು. ಪೂರ್ಣಿಮಾ ನಮೋಶಿ, ನಾಗವೇಣಿ ಪಾಟೀಲ್ ರೇವೂರ, ಸಂಗೀತಾ ಕೊರಳ್ಳಿ, ಚಂದನ ಬಿರಾದಾರ, ಮಲ್ಲಮ್ಮ, ಲತಾ ಬಿಲಗುಂದಿ, ಕಮಲಾ ಶಾಬಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net