ಮಳೆಗಾಗಿ ನಡೆಯಿತು ಓಕುಳಿ ಆಚರಣೆ: ಬಸರಾಳು ಗ್ರಾಮದಲ್ಲಿ ವಿಶೇಷ ಪ್ರಾರ್ಥನೆ

Basaralu village Special Puja for rain mandya
Published on

ಮಂಡ್ಯ: ಭೀಕರ ಬರಗಾಲದಿಂದ ತತ್ತರಿಸುವ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಬಸರಾಳು ಗ್ರಾಮದಲ್ಲಿ ಮಂಗಳವಾರ ರಾತ್ರಿ ಓಕುಳಿ ಆಚರಣೆ ಹಾಗೂ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಓಕುಳಿ ಕೊಳ ನಿರ್ಮಾಣ ಮಾಡಿ ನೀರು ತುಂಬಿಸಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಕೊಳದ ಬಳಿ ಪ್ರತಿಷ್ಠಾಪಿಸಲಾಯಿತು. ಬಳಿಕ ಮಂಗಳವಾದ್ಯ, ತಮಟೆ, ಕೊಂಬು ಕಹಳೆ, ಛತ್ರಿ ಚಾಮರಗಳೊಂದಿಗೆ ಹೋಮ ಹವನಾದಿ ನಡೆಸಿ ಓಕುಳಿ ಕೊಳದ ನೀರಿನಿಂದ ಸ್ವಾಮಿಗೆ ಅಭ್ಯಂಜನ ಮಾಡಿಸಲಾಯಿತು. ನಂತರ ಮಹಾ ಮಂಗಳಾರತಿ ನೆರವೇರಿಸಲಾಯಿತು.

ಸ್ವಾಮಿಯ ಅಭ್ಯಂಜನದ ನೀರನ್ನು ಓಕುಳಿ ಕೊಳದಲ್ಲಿ ಮಿಶ್ರಣ ಮಾಡಲಾಯಿತು. ಸ್ವಾಮಿಯ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಇತ್ತ ಭಕ್ತರು ಕೊಳದ ಬಣ್ಣದ ನೀರಿನಲ್ಲಿ ಮಿಂದು ಪರಸ್ಪರ ನೀರನ್ನು ಎರಚಿಕೊಂಡು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net