

ಹಾನಗಲ್ಲ: ತಾಲೂಕಿನ ಮಾರನಬೀಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬಸಪ್ಪ ಹನುಮಂತಗೌಡ ಚೆನ್ನಕ್ಕನವರ ಹಾಗೂ ಉಪಾಧ್ಯಕ್ಷರಾಗಿ ನೂರಅಹ್ಮದ್ ಹರವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ನಡೆದ ಚುನಾವಣೆಯಲ್ಲಿ ಬಸಪ್ಪ ಹನುಮಂತಗೌಡ ಚೆನ್ನಕ್ಕನವರ ಹಾಗೂ ನೂರಅಹ್ಮದ್ ಹರವಿ ಅವರ ಆಯ್ಕೆ ಪ್ರಕ್ರಿಯೆ ನಡೆಯಿತು. ಇದರೊಂದಿಗೆ ನಿರ್ದೇಶಕರಾಗಿ ಮಲ್ಲೇಶಪ್ಪ ಕರಿಯಪ್ಪನವರ, ಹನುಮಂತಪ್ಪ ಗಂಜಿಗಟ್ಟಿ, ಕೀರಪ್ಪ ಆಲದಕಟ್ಟಿ, ಸುರೇಶ ಕಾಸಂಬಿ, ಸಂಗಪ್ಪ ಶೆಟ್ಟರ, ಕೀರಪ್ಪ ಈಳಗೇರ, ಶಂಕ್ರಪ್ಪ ವಡ್ಡರ, ಈರಪ್ಪ ಸೂಲಿ, ಸರೋಜಾ ಚಂಗಳಮ್ಮನವರ, ಸರೋಜಾ ಪೂಜಾರ ಸೇರಿ ಒಟ್ಟು 12 ಜನರನ್ನು ಒಳಗೊಂಡ ಆಡಳಿತ ಮಂಡಳಿ ರಚನೆಗೊಂಡಿತು.
ಸಹಕಾರ ಸಂಘಗಳ ತಾಲೂಕು ಅಭಿವೃದ್ಧಿ ಅಧಿಕಾರಿ ಬಿ. ಪುಷ್ಪಾವತಿ, ಮುಖ್ಯ ಕಾರ್ಯನಿರ್ವಾಹಕ ನಾಗಪ್ಪ ವಡೆಯರ, ಗ್ರಾಮದ ಪ್ರಮುಖರಾದ ಪುಟ್ಟಪ್ಪ ನರೇಗಲ್, ಸುರೇಶ ನೆರ್ಕಿಮನಿ, ಶಿದ್ದಪ್ಪ ಚಂಗಳಮ್ಮನವರ, ಮಂಜಪ್ಪ ಹರ್ಲಾಪುರ, ಮಹಲಿಂಗಪ್ಪ ಹಾದಿ, ಶಂಕರಗೌಡ ಪಾಟೀಲ ಇತರರು ಉಪಸ್ಥಿತರಿದ್ದರು. ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಗ್ರಾಮಸ್ಥರು ಸನ್ಮಾನಿಸಿದರು.