

ಹಳಿಯಾಳ: ಪಟ್ಟಣದ ಬಸಪ್ಪನ ಹೊಂಡದಲ್ಲಿ ಬಿದ್ದು ವ್ಯಕ್ತಿಯೊರ್ವ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಟ್ಟಣದ ಮುಖ್ಯ ಮಾರುಕಟ್ಟೆ ನಿವಾಸಿ ಪ್ರಸಾದ (ಬಂಟಿ) ಸೀತಾರಾಮ ಬಾಂದೇಕರ (43) ಮೃತಪಟ್ಟವ. ನನ್ನ ಮಗ ಯಾವುದೋ ವಿಷಯ ಮನಸಿಗೆ ಹಚ್ಚಿಕೊಂಡು ಬಸಪ್ಪನ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತನ ಸಾವಿನಲ್ಲಿ ಯಾರ ಬಗ್ಗೆಯೂ ಸಂಶಯವಿಲ್ಲ ಎಂದು ಆತನ ತಾಯಿ ಸುಕಾಂತ ಅವರು ಹಳಿಯಾಳ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.