ಅರ್ಚಕನನ್ನು ಆಯ್ಕೆ ಮಾಡಿದ ಬಸಪ್ಪ: ಹೊಳಲು ಗ್ರಾಮದ ತಗಡೂರಯ್ಯಸ್ವಾಮಿ ದೇವಸ್ಥಾನ

Basappa chose the priest Mandya
Published on

ಮಂಡ್ಯ: ತಾಲೂಕಿನ ಹೊಳಲು ಗ್ರಾಮದಲ್ಲಿ ತಗಡೂರಯ್ಯಸ್ವಾಮಿ ದೇವಸ್ಥಾನಕ್ಕೆ ಅರ್ಚಕನನ್ನು ಸೋಮವಾರ ಚನ್ನಪಟ್ಟಣದ ಶಿವ ಸಾರಥಿ ಬಸಪ್ಪ ನೇಮಿಸಿತು.

ಹಿಂದಿನ ಅರ್ಚಕ ಶಿವಣ್ಣ ನಿವೃತ್ತಿಯಾದ ಹಿನ್ನೆಲೆಯಲ್ಲಿ ನೂತನ ಅರ್ಚಕರನ್ನು ನೇಮಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಹೋಮ ಹವನ ನಡೆಯಿತು. ನಂತರ ಬಲಮುರಿ ಗಣಪತಿ ದೇವಸ್ಥಾನ ಆವರಣಕ್ಕೆ ಬಸಪ್ಪನ ಕರೆತಂದು ವಿಶೇಷ ಪೂಜೆ ನೆರವೇರಿಸಿ. ದೊಡ್ಡಯ್ಯಸ್ವಾಮಿ ಬಸವಪ್ಪನ ಸಮೇತ, ತಮಟೆ, ನಗರಿ, ವಾದ್ಯಗಳ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಎಲ್ಲ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಅಂತೆಯೇ ದೊಡ್ಡಯ್ಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಅರ್ಚಕರ ನೇಮಕ ಮಾಡುವ ಪ್ರಕ್ರಿಯೆ ಪ್ರಾರಂಭವಾಯಿತು.

ಯಾರು ಅರ್ಚಕರಾಗಬೇಕು ಎಂಬುವ 10 ಜನರು ಬಸವನ ಎದುರಿಗೆ ಸಾಲಾಗಿ ಕುಳಿತರು. ಅತ್ತ ಬಸಪ್ಪನ ಪವಾಡ ನೋಡಲು ನೂರಾರು ಭಕ್ತರು ಹಾಜರಿದ್ದರು. ನಂತರ ಸರತಿ ಸಾಲಿನ ಕುಳಿತಿರುವ ನೂತನ ಅರ್ಚಕರನ್ನಾಗಿ ಗಿರೀಶ್ ಎಂಬುವರನ್ನು ಗುರುತಿಸಿ ಕೊಂಬಿನಿಂದ ಬೆನ್ನಿಗೆ ತಿವಿದು ಆಯ್ಕೆ ಮಾಡಿತು. ಬಳಿಕ ಕಾಲುವೆಗೆ ಹೋಗಿ ಸ್ನಾನ ಮಾಡಿಸಿ ಅಲ್ಲಿಂದ ದೇವಸ್ಥಾನಕ್ಕೆ ಕರೆದುಕೊಂಡು ದೇವತಾ ಕಾರ್ಯಗಳನ್ನು ನೆರವೇರಿಸಿ ಪೂಜೆ ಸಲ್ಲಿಸಲಾಯಿತು.

ಮುಖಂಡರಾದ ಸದಾನಂದ, ಶಂಕರ್ ಪೂಜಾರಿ, ಯೋಗೇಶ್‌ಕುಮಾರ್, ಪುಟ್ಟಸ್ವಾಮಿ, ನಾಗರಾಜು, ಕುಮಾರ್, ಜಯಸ್ವಾಮಿ, ಪುಟ್ಟಹುಚ್ಚಯ್ಯ, ಮಡಿವಾಳ ಮಾಚಿದೇವರ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ಜಗದೀಶ್, ಗುಣಶೇಖರ, ಕುಮಾರ, ನಾಗರಾಜ್, ತಾಂಡವ್, ಮಂಜುನಾಥ್, ರವಿಕುಮಾರ್, ವಿನೋದ್, ಉಮಾಶಂಕರ್, ಶಿವಲಿಂಗಯ್ಯ, ಶಿವಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net