ಎಲ್ಲರಿಗೂ ನಾನೇ ಪ್ರತಿಪಕ್ಷ ನಾಯಕ

Basangouda Yatnal
Published on

ಕಲಬುರಗಿ: ಸರ್ವಪಕ್ಷಗಳಿಗೂ ನಾನೇ ವಿರೋಧ ಪಕ್ಷದ ನಾಯಕ. ನಾನು ಎಂದಿಗೂ ಹೀರೋ ಅಲ್ಲ. ಯಾವತ್ತಿಗೂ ವಿಲನ್ ಆಗಿದ್ದೇನೆ. ವಿಲನ್ ಇದ್ರೆನೆ ಹೀರೋಗೆ ಕಿಮ್ಮತ್ತಿರುತ್ತದೆ. ಅಂಬರೀಶ ಸಹ ವಿಲನ್ ಇದ್ರು. ನಂತರ ಹೀರೋ ಆಗಿದ್ದರು. ನಮಗೂ ಹೀರೋ ಆಗುವ ಅವಕಾಶ ಬರಬಹುದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಉಪಾಧ್ಯಕ್ಷ, ಕಾರ್ಯದರ್ಶಿ ಕೊಟ್ಟಿದ್ದಾರೆ. ಬೆಣ್ಣೆ ಎಲ್ಲವನ್ನು ಯಡಿಯೂರಪ್ಪ ಹೊಡೆದಿದ್ದು, ನಮ್ಮ ಭಾಗಕ್ಕೆ ಮಜ್ಜಿಗೆ ಕೊಟ್ಟಿದ್ದಾರೆ. ರಾಜ್ಯಾಧ್ಯಕ್ಷ, ಪರಿಷತ್ ಸದಸ್ಯ ಸೇರಿ ಎಲ್ಲರೂ ಅವರೇ ಇರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಲ್ಲಿ ಒಂದು ಮನೆ ಆರು ಬಾಗಿಲು ಆಗಿವೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಪರಮೇಶ್ವರ, ಪ್ರಿಯಾಂಕ್, ಎಂ.ಬಿ.ಪಾಟೀಲ್‌ರದ್ದು ಒಂದೊAದು ಬಾಗಿಲು ಇವೆ. ಅವಕ್ಕೆ ಗೋಡೆಯೇ ಇಲ್ಲ. ನಮ್ಮದು (ಬಿಜೆಪಿ) ಮೂರು ಬಾಗಿಲು ಆಗಿದೆ. ಲೋಕಸಭೆ ಮೇಲೆ ದಾಳಿಯನ್ನು ನಿರುದ್ಯೋಗಿಗಳು ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಕಾಮನ್ ಸೆನ್ಸ್ ಇಲ್ಲದೆ ಹೇಳಿಕೆ ಕೊಡುತ್ತಾರೆ. ಲೋಕಸಭೆ ದಾಳಿಯಲ್ಲಿ ರಾಜಕಾರಣ ಮಾಡಬಾರದು. ಹಿಂದೆ ಯುಪಿಎ ಅಧಿಕಾರದಲ್ಲಿದ್ಧಾಗ ಪಾಕಿಸ್ತಾನ ದಾಳಿ ಮಾಡಿತ್ತು. ಆಗ ನಾವು ಪಕ್ಷಾತೀತವಾಗಿ ಹೋರಾಟ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಎಲ್ಲದಕ್ಕೂ ಚಿಲ್ಲರೇ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net