ರೋಣ ಪುರಸಭೆಗೆ ಬಸಮ್ಮ ಅಧ್ಯಕ್ಷೆ, ಹನುಮಂತ ಉಪಾಧ್ಯಕ್ಷ

18 RON 1
Published on

ರೋಣ: ಇಲ್ಲಿಯ ಪುರಸಭೆಯ ಕೊನೆಯ ಅವಧಿಗಾಗಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಸಮ್ಮ ಕೊಪ್ಪದ ಹಾಗೂ ಉಪಾಧ್ಯಕ್ಷರಾಗಿ ಹನುಮಂತಪ್ಪ ತಳ್ಳಿಕೇರಿ ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ಪುರಸಭೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಸಮ್ಮ ಕೊಪ್ಪದ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹನುಮಂತಪ್ಪ ತಳ್ಳಿಕೇರಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿ, ತಹಸೀಲ್ದಾರ್ ನಾಗರಾಜ ಕೆ. ಅವರು ಅವಿರೋಧ ಆಯ್ಕೆ ಘೊಷಿಸಿದರು

ಸಂಭ್ರಮಾಚರಣೆ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಂತರ ಪುರಸಭೆ ಆವರಣದಲ್ಲಿ ಕಾಂಗ್ರೆಸ್ ಸದಸ್ಯರು ಹಾಗೂ ಕಾರ್ಯಕರ್ತರು ಸಂಭ್ರಮಾಚರಿಸಿದರು.

ಬಾರದ ಬಿಜೆಪಿ ಸದಸ್ಯರು: ಕೇವಲ 6 ಸ್ಥಾನ ಹೊಂದಿರುವ ಬಿಜೆಪಿ ಸದಸ್ಯರು ಪುರಸಭೆಯತ್ತ ಸುಳಿಯಲಿಲ್ಲ. ಹೀಗಾಗಿ ಪುರಸಭೆಯಲ್ಲಿ ಬಿಜೆಪಿ ಸ್ಥಿತಿ ಆಟಕುಂಟು ಲೆಕ್ಕಕ್ಕಿಲ್ಲದಂತಾಗಿದೆ.

ಪುರಸಭೆ ಸದಸ್ಯರಾದ ಮಿಥುನ ಪಾಟೀಲ, ಶಂಕುಂತಲಾ ಚಿತ್ರಗಾರ, ವಿದ್ಯಾ ದೊಡ್ಡಮನಿ, ನಾಜಬೇಗಂ ಯಲಿಗಾರ, ದಾವಲಸಾಬ ಬಾಡಿನ, ಮುತ್ತಣ್ಣ ಗಡಗಿ, ಸಂಗಪ್ಲ ಜಿಡ್ಡಿಬಾಗಿಲ, ಈಶಪ್ಪ ಕಡಿಬಿನಕಟ್ಡಿ, ಮಲ್ಲಯ್ಯ ಮಹಾಪುರುಷಮಠ, ಬಾವಾಸಾಬ ಬೆಟಗೇರಿ, ಕೆಪಿಸಿಸಿ್ ಸದಸ್ಯ ಸಂಜಯ ದೊಡ್ಡಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net