ಸಮ್ಯಕ್ ರತ್ನತ್ರಯದಿಂದ ದುಗುಡ ದೂರ : ಮೂಡುಬಿದಿರೆ ಶ್ರೀ ಆಶೀರ್ವಚನ

New Project
Published on

ಮೂಡುಬಿದಿರೆ: ನಮ್ಮ ಜೀವನದಲ್ಲಿ ಸಮ್ಯಕ್ ರತ್ನ ತ್ರಯ ಪಾಲಿಸಿದಲ್ಲಿ ದುಗುಡಗಳನ್ನು ದೂರ ಮಾಡಬಹುದು. ಸರ್ವಜ್ಞನಾದ ಭಗವಂತನ ಧರ್ಮೋಪದೇಶಗಳಿಂದ ಒಳಿತುಗಳು ಹೊಳೆಯುತ್ತದೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಮೂಡುಬಿದಿರೆ ಪ್ರಾಚೀನ ಬಸದಿಗಳಲ್ಲಿ ಒಂದಾದ ಪಡು ಬಸದಿಯ (ಭಗವಾನ್ ಅನಂತನಾಥ, ಧರ್ಮನಾಥ, ವಿಮಲನಾಥ ಸ್ವಾಮಿ ಬಸದಿ) ವಾರ್ಷಿಕ ಉತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಗುರುವಾರ ಮಾತನಾಡಿದರು.

ಪುರೋಹಿತ ಅರವಿಂದ ತಂಡದವರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಬ್ರಹ್ಮ ದೇವರ ಆರಾಧನೆ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹಾಗೂ ಮಂಜುಳಾ ದಂಪತಿ ನೆರವೇರಿಸಿದರು. ರಾತ್ರಿ ದೇವರ ಉತ್ಸವ, 24 ಕಲಶ ಅಭಿಷೇಕ, ಸ್ಥಾನಿಯ ಮಹಿಳಾ ಸಂಘ ದವರಿಂದ ಸಾಮೂಹಿಕ ಅಷ್ಟಾವಿಧಾರ್ಚನೆ, ಕುಂಕುಮಾರ್ಚನೆ ಪೂಜೆ. ದಾನಿಗಳಿಗೆ ಗೌರವಾರ್ಪಣೆ ನಡೆಯಿತು.

ಬಸದಿಗಳ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ್, ಆದರ್ಶ್ ಮೂಡುಬಿದಿರೆ, ವಕೀಲ ಬಾಹುಬಲಿ ಪ್ರಸಾದ್, ಪ್ರಮುಖರಾದ ಗುಣಪಾಲ ಹೆಗ್ಡೆ, ಶೈಲೇಂದ್ರ, ಕೊಡಿಪಾಡಿ ಅಶೋಕ್, ನಾಗವರ್ಮ ಪುತ್ತಿಗೆ, ಮಯೂರ್ ಅಧಿಕಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net